100 ಅಡಿ ಸಮೀಪಿಸಿದ ಕೆಆರ್ಎಸ್ ಆಣೆಕಟ್ಟು

100 ಅಡಿ ಸಮೀಪಿಸಿದ ಕೆಆರ್ಎಸ್ ಆಣೆಕಟ್ಟು

ಮಂಡ್ಯ,ಆ. 9: ಕನ್ನಂಬಾಡಿ ಕಟ್ಟೆಗೆ 60 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು. ಇದರಿಂದಾಗಿ ಕೆಆರ್ಎಸ್ನ ನೀರಿನ ಸಂಗ್ರಹ ಮಟ್ಟ 99.50 ಅಡಿಗೆ ಹೆಚ್ಚಾಗಿದೆ. ಕೆಲವೇ ಗಂಟೆಗಳಲ್ಲಿ ಅದು 100 ಅಡಿ ದಾಟುವ ಸಾದ್ಯತೆ ಇದೆ.

ಇಂದು ಬೆಳಗ್ಗೆ 7.30ರ ವೇಳೆ 51,152 ಕ್ಯೂಸೆಕ್ ಹರಿದು ಬರುತ್ತಿತ್ತು.  ಆಗ ನೀರಿನ ಮಟ್ಟ 97.50 (20.915 ಟಿಎಂಸಿ) ಅಡಿಗೇರಿತ್ತು. 12ರ ವೇಳೆಗೆ ಒಳಹರಿವು 60 ಸಾವಿರ ಕ್ಯೂಸೆಕ್ ದಾಟಿದ್ದು, ನೀರಿನ ಮಟ್ಟ 99.50 ಅಡಿಗೆ ಹೆಚ್ಚಾಗುತ್ತಿದ್ದಂತೆ. ಕೆಲವೇ ಗಂಟೆಗಳಲ್ಲಿ ನೀರಿನ ಸಂಗ್ರಹ ಮಟ್ಟ100 ಅಡಿ ದಾಟುವ ನಿರೀಕ್ಷೆ ಹೆಚ್ಚಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos