ವಾಂತಿ,ಬೇಧಿ : 20 ಮಂದಿ ಅಸ್ವಸ್ಥ

ವಾಂತಿ,ಬೇಧಿ : 20 ಮಂದಿ ಅಸ್ವಸ್ಥ

ಕೊಪ್ಪಳ, ಮೇ. 14, ನ್ಯೂಸ್‍ ಎಕ್ಸ್ ಪ್ರೆಸ್‍:  ಕುಷ್ಟಗಿ ತಾಲ್ಲೂಕಿನ ಕೊರಡಕೇರಾ ಗ್ರಾಮದಲ್ಲಿ ಸಾಮೂಹಿಕ ವಾಂತಿಬೇಧಿ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಸುಮಾರು ಇಪ್ಪತ್ತಕ್ಕೂ  ಹೆಚ್ಚು ಮಂದಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಕುಡಿಯೋ ನೀರಿಗೆ ಚರಂಡಿ ನೀರು ಸೇರಿ ಜನರಿಗೆ ವಾಂತಿಬೇಧಿ ಶುರುವಾಗಿದೆ. ವಾಂತಿ ಭೇದಿಗೆ ಕಲುಷಿತ ಕುಡಿಯುವ ನೀರು ಸೇವನೆಯೇ ಕಾರಣ ಎಂದ ಜಿಲ್ಲಾ ವೈದ್ಯಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಗ್ರಾಮಪಂಚಾಯ್ತಿ ನಿರ್ಲಕ್ಷ

ಕಳೆದ ಒಂದು ವಾರದಿಂದಲೂ ಕೆಲವರು ಜನರು ವಾಂತಿಭೇದಿಯಿಂದ ಬಳಲುತ್ತಿದ್ದರು. ಕುಡಿಯುವ ನೀರು ಪೂರೈಕೆ ಕೊಳವೆಸಂಪೂರ್ಣ ಹಾಳಾಗಿದ್ದು,  ಅದರಲ್ಲಿ ಕೊಳಚೆ ನೀರು ಬೆರೆಯುತ್ತಿದೆ, ಪೈಪ್‌ಗಳನ್ನು ದುರಸ್ತಿಗೊಳಿಸುವಂತೆ ಕಳೆದ ಒಂದು ವಾರದ ಹಿಂದೆಯೇ ಜನರು ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ದಾರೆ. ಆದ್ರೂ ಯಾರೂ ತಲೆಕೆಡಿಸಿಕೊಂಡಿಲ್ಲ. ಸಿಬ್ಬಂದಿ ನಿರ್ಲಕ್ಷ್ಯವೇ ಜನರ ಅನಾರೋಗ್ಯಕ್ಕೆ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೈದ್ಯರ ತಂಡ ಭೇಟಿ

ಘಟನೆಯ ಹಿನ್ನೆಲೆಯಲ್ಲಿ ಚಳಗೇರಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಮತ್ತು ಸಿಬ್ಬಂದಿ ಕೊರಡಕೇರಾ ಗ್ರಾಮಕ್ಕೆ ಭೇಟಿ ನೀಡಿ ಅಸ್ವಸ್ಥಗೊಂಡವರಿಗೆ ಗ್ರಾಮದಲ್ಲಿಯೇ ಚಿಕಿತ್ಸೆ ನೀಡಿದ್ದಾರೆ. ಮತ್ತು ಕಾಯಿಸಿ ಆರಿಸಿದ ಅಥವಾ ಶುದ್ಧೀಕರಿಸಿದ ನೀರನ್ನು ಮಾತ್ರ ಸೇವಿಸುವಂತೆ ಗ್ರಾಮಸ್ಥರಿಗೆ ಸಲಹೆ ನೀಡಿದ್ದಾರೆ. ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಭೇಟಿ ಮಾಡಿ ನೀರು ಪೂರೈಕೆ ಕೊಳವೆ ದುರಸ್ತಿಗೊಳಿಸುವಂತೆ ಸೂಚಿಸಿದ್ದಾರೆ.

 

 

ಫ್ರೆಶ್ ನ್ಯೂಸ್

Latest Posts

Featured Videos