‘ಕೋತಿ ನನ್ನ ಕೆನ್ನೆಗೆ ಬಾರಿಸಿದೆ’- ಪ್ರಿಯಾಂಕಾ

‘ಕೋತಿ ನನ್ನ ಕೆನ್ನೆಗೆ ಬಾರಿಸಿದೆ’- ಪ್ರಿಯಾಂಕಾ

ಮುಂಬೈ, ಜೂನ್. 13:  “ಆಗ ನಾನು 3ನೇ ತರಗತಿ, ಲಖನೌ‌ನಲ್ಲಿದ್ದೆವು. ನಮ್ಮ ಶಾಲೆಯ ಬಳಿ ಮರವೊಂದಿತ್ತು. ಅಲ್ಲಿಗೆ ಬಹಳಷ್ಟು ಕೋತಿಗಳು ಬಂದು ಹೋಗುತ್ತಿದ್ದವು. ಆಗ ಮರದ ಮೇಲೆ ಹೆಣ್ಣು ಕೋತಿಯೊಂದು ನಿಂತು ಅದ್ಯಾಕೋ ಏನೋ ಗೊತ್ತಿಲ್ಲ, ಪರಚಿಕೊಳ್ಳುತ್ತಿತ್ತು. ಇದನ್ನು ನೋಡಿ ನನಗೆ ನಗು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಆ ಕೋತಿಯನ್ನು ನೋಡಿ ಜೋರಾಗಿ ನಕ್ಕುಬಿಟ್ಟೆ.”  ಎಂದು ನಟಿ ಪ್ರಿಯಾಂಕಾ ಚೋಪ್ರಾ ಹೇಳಿದರು.

“ಅಯ್ಯೋ ಆಕೋತಿ ನೋಡಿ ಹೇಗೆ ಮೈಯಲ್ಲಾ ಪರಚಿಕೊಳ್ಳುತ್ತಿದೆ ಎಂದು ನಗಾಡುತ್ತಿದ್ದೆ. ಆ ಕೋತಿ ಮರದಿಂದ ಕೆಳಗಿಳಿದು ಬಂತು. ನನ್ನನ್ನು ನೋಡಿತು. ಕೆನ್ನೆಗೆ ಒಂದು ತಪರಾಕಿ ನೀಡಿ ಮತ್ತೆ ಮರ ಹತ್ತಿ ಕುಳಿತುಕೊಂಡಿತು” ಎಂದಿದ್ದಾರೆ.  ಈ ಘಟನೆಯನ್ನು ಹೇಳಿದ ಬಳಿಕ ಅಲ್ಲೇ ಇದ್ದ ಅವರ ತಾಯಿಯ ಕಡೆಗೆ ನೋಡುತ್ತಾ ನೆನಪಿದಿಯಾ ಮಮ್ಮಿ, ಕೋತಿ ನನ್ನ ಕೆನ್ನೆಗೆ ಬಾರಿಸಿತ್ತು ಎಂದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos