ಕೋಟೆ ನಗರಿಯಲ್ಲಿಂದು ಹಬ್ಬ

ಕೋಟೆ ನಗರಿಯಲ್ಲಿಂದು ಹಬ್ಬ

ಚಿತ್ರದುರ್ಗ, ಜೂ. 29 : ಕೋಟೆಯ ಚಿತ್ರದುರ್ಗದಲ್ಲಿಂದು ಹಬ್ಬದ ವಾತವರಣ ಶುರುವಾಗಿದೆ. 15ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮೆರವಣಿಗೆಗೆ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಎಸ್ಪಿ ಡಾ.ಕೆ.ಅರುಣ್ ಚಾಲನೆ ನೀಡಿದರು. ಸಮ್ಮೇಳನಾಧ್ಯಕ್ಷ ಡಾ.ಮೀರಾಸಾಬಿ ಹಳ್ಳಿ ಟಿ.ಶಿವಣ್ಣ ನಗರದ ಪ್ರಮುಖ ಬೀದಿಗಳಲ್ಲಿ ಅದ್ಧೂರಿ ಮೆರವಣಿಗೆ ಮೂಲಕ ಸಮ್ಮೇಳನದ ತರಾಸು ರಂಗಮಂದಿರದ ರಾಷ್ಟ್ರ ನಾಯಕ ನಿಜಲಿಂಗಪ್ಪ ವೇದಿಕೆಗೆ ಕರೆ ತರಲಾಯಿತು.
ನೂರಾರು ಜನಪದ ಕಲಾವಿದರು ಮೆರವಣಿಗೆಗೆ ಮೆರಗು ನೀಡಿದರು. ತಮಟೆ, ,ಲಂಬಾಣಿ ನೃತ್ಯ,ಕೋಲಾಟ,ಕಹಳೆ ಸೇರಿದಂತೆ ನಾನಾ ಜನಪದ ಕಲಾವಿದರೊಂದಿಗೆ ಪ್ರಸಿದ್ಧ ಕವಿ, ಕಾದಂಬರಿಕಾರರ,ಲೇಖಕರ ಭಾವ ಚಿತ್ರಗಳೊಂದಿಗೆ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ.ದೊಡ್ಡ ಮಲ್ಲಯ್ಯ ಸೇರಿದಂತೆ ಪರಿಷತ್ ಪ್ರಮುಖರು ಇದ್ದರು.
ಬೆಳಗ್ಗೆ 11ಗಂಟೆಗೆ ಕಸಾಪ ರಾಜ್ಯಾಧ್ಯಕ್ಷ ಡಾ.ಮನುಬಳಿಗಾರ್ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ಸಮ್ಮೇಳನ ಸರ್ವಾಧ್ಯಕ್ಷ ಡಾ. ಮೀರಾಸಾಬಿಹಳ್ಳಿ ಶಿವಣ್ಣ ಪ್ರಧಾನ ಭಾಷಣ ಮಾಡಲಿದ್ದಾರೆ. ಡಾ.ಬಂಜಗೆರೆ ಜಯಪ್ರಕಾಶ್ ನಿಕಟಪೂರ್ವ ಸಮ್ಮೇಳನಾಧ್ಯಕ್ಷರ ಭಾಷಣ ಮಾಡಲಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos