ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಕಾವು

ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಕಾವು

ಕೊಪ್ಪಳ , ಏ. 10, ನ್ಯೂಸ್ ಎಕ್ಸ್ ಪ್ರೆಸ್: ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಕಾವು ರಂಗೇರಿದೆ. ಹೌದು, ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಎರಡನೇ ಭಾರಿ ಲೋಕಸಭಾ ಪ್ರವೇಶಿಸಲು ಪ್ರಯತ್ನಿಸುತ್ತಿದ್ರೆ ಇತ್ತ ಮೊದಲಭಾರಿಗೆ ಲೋಕ ಚುನಾವಣೆಗೆ ದುಮುಕಿದ ರಾಜಶೇಖರ್ ಹಿಟ್ನಾಳರನ್ನು ಗೆಲ್ಲಿಸಲು ತಂದೆ ಮತ್ತು ಅಣ್ಣ ಟೊಂಕಕಟ್ಟಿ ನಿಂತಿದ್ದಾರೆ.

ಹಿಟ್ನಾಳ ಮತ್ತು ಕರಡಿ ಕುಟುಂಬದ ಪ್ರತಿಷ್ಟೇಯ ಕಣವಾಗಿರುವ ಕೊಪ್ಪಳ ಲೋಕಸಭಾ ಕ್ಷೇತ್ರ ಎರಡನೇ ಭಾರಿಯೂ 2 ಕುಟುಂಬದ ಮದ್ಯ ಪೈಪೋಟಿ ಎದುರಾಗಿದೆ. ಕಳೆದ 2014ರ ಚುನಾವಣೆಯಲ್ಲಿ ಕರಡಿ ಸಂಗಣ್ಣ ಮತ್ತು ಬಸವರಾಜ ಹಿಟ್ನಾಳ ಎದುರಾಗಿದ್ದು ಕರಡಿ ವಿರುದ್ದ ಕಡಿಮೇ ಅಂತರದಲ್ಲಿ ಹಿಟ್ನಾಳ ಸೋಲು ಕಾಣಬೇಕಾಯಿತು. ಅದೇ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಬಸವರಾಜ ಹಿಟ್ನಾಳ ತನ್ನ ಮಗ ರಾಜಶೇಖರನ್ನು ಕಣಕ್ಕೆ ಇಳಿಸಿದ್ದು ಮಗನ ಗೆಲುವಿಗಾಗಿ ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ. ಇನ್ನೂ ಅಣ್ಣ ರಾಘವೇಂದ್ರ ಹಿಟ್ನಾಳ ಕೂಡ ತಮ್ಮಗ ಗೆಲುವಿಗಾಗಿ ಕಾಲಿಗೆ ಚಕ್ರಕಟ್ಟಿ ಕ್ಷೇತ್ರದುದ್ದಕ್ಕು ಓಡಾಟ ನಡೆಸಿದ್ದಾರೆ.

ರಾಘವೇಂದ್ರ ಹಿಟ್ನಾಳ ಕೊಪ್ಪಳ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರಿದ್ದು ಜೊತೆಗೆ ಸಂಸದಿಯ ಕಾರ್ಯದರ್ಶಿಯಾಗಿದ್ದಾರೆ. ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಕರಡಿ ಸಂಗಣ್ಣ ವಿರುದ್ದ ಸೋತು ಸುಣ್ಣವಾಗುತ್ತಿದ್ದ ತಂದೆ ಬಸವರಾಜ ಹಿಟ್ನಾಳ,2013ರ ವಿಧಾನಸಭಾ ಚುನಾವಣೆಯಲ್ಲಿ ಮೊದಲಭಾರಿಗೆ ರಾಘವೇಂದ್ರ ಹಿಟ್ನಾಳ ಕರಡಿ ಸಂಗಣ್ಣ ವಿರುದ್ದ ಸ್ಪರ್ಧಿಸಿ ಐತಿಹಾಸಿಕ ಗೆಲುವು ಸಾದಿಸಿದರು. ತಂದೆಯ ಸೇಡನ್ನು ಮಗ ರಾಘವೇಂದ್ರ ಹಿಟ್ನಾಳ ತೀರಿಸಿದರು. ಇತ್ತ ಲೋಕಸಭಾ ಚುನಾವಣೆಯಲ್ಲಿ ತಂದೆಯ ಸೇಡನ್ನು ತೀರಿಸಲು ರಾಜಶೇಖರ್ ಹಿಟ್ನಾಳ ಕಣದಲ್ಲಿದ್ದು ಮಗನ ಗೆಲುವಿಗಾಗಿ ತಂದೆ ತಮ್ಮನ ಗೆಲುವಿಗಾಗಿ ಅಣ್ಣ ಶತಾಯಗತಾಯ ಪ್ರಯತ್ನ ಪಡುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos