ಬೆಳ್ಳಂಬೆಳ್ಳಗೆ ಕೊಪ್ಪಳ ಸುತ್ತಮುತ್ತ ಮಳೆರಾಯನ ಆಗಮನ

ಬೆಳ್ಳಂಬೆಳ್ಳಗೆ ಕೊಪ್ಪಳ ಸುತ್ತಮುತ್ತ ಮಳೆರಾಯನ ಆಗಮನ

ಕೊಪ್ಪಳ: ರಾಜ್ಯದಲ್ಲಿ ಮೂರ್ನಾಲ್ಕು ತಿಂಗಳಿಂದ ಬರ ಪರಿಸ್ಥಿತಿ ಆವರಿಸಿದ್ದು, ಇದರಿಂದ ಜನರು ಕಂಗಾಲಾಗಿದ್ದರು, ಈ ವರ್ಷ ದಾಖಲೇ ಮಟ್ಟದಲ್ಲಿ ಬಿಸಿಲು ಹೆಚಾಗಿದ್ದೆ. ಹೌದು ರಾಜ್ಯದಲ್ಲಿ ಕೆಲವು ದಿನಗಳಿಂದ ಮುಂಗಾರು ಮಳೆಯಾಗುತ್ತಿದ್ದು, ಇದರಿಂದ  ಜನರು ನಿಟ್ಟುಸಿರು ಬಿಡುವಂತಾಗಿದೆ. ರಾಜ್ಯದ ಹಲವಾರು ಭಾಗಗಳಲ್ಲಿ ಮಳೆಯಾಗಲಿದೆ ಎಂದು ಕಳೆದ ವಾರಾಂತ್ಯ ಮತ್ತು ಈ ವಾರದ ಆರಂಭದಲಲ್ಲಿ ಐಎಂಡಿ ವರದಿ ನೀಡಿತ್ತು.

ಇಂದು ಬೆಳ್ಳಂಬೆಳಗ್ಗೆಯೇ ಕೊಪ್ಪಳ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವರುಣದೇವ ಕೃಪೆ ತೋರಿದ್ದಾನೆ. ಕೊಪ್ಪಳ ಜಿಲ್ಲೆಯಲ್ಲಿ ಧಾರಾಕಾರವಾಗಿ ಅಲ್ಲದಿದ್ದರೂ ಬಿರು ಬೇಸಿಗೆಯ ಧಗೆಯಿಂದ ತತ್ತರಿಸಿದ್ದ ಜನಕ್ಕೆ ಹಾಯೆನಿಸುವಷ್ಟು ಮಳೆ ಆಗಿದೆ. ಕೊಪ್ಪಳ ರಾಜ್ಯದ ಉತ್ತರ ಭಾಗದಲ್ಲ್ಲಿರುವುದರಿಂದ ಪ್ರದೇಶದ ಇತರ ಜಿಲ್ಲೆಗಳಂತೆ ಇಲ್ಲೂ ಬೇಸಿಗೆ ಅಸಹನೀಯವಾಗಿರುತ್ತದೆ. ನೆಲ ಹೆಂಚಿನ ಹಾಗೆ ಕಾದಿರುತ್ತದೆ ಮತ್ತು ಮೇಲಿಂದ ಸೂರ್ಯ ಬೆಂಕಿಯುಗುಳುತ್ತಿರುತ್ತಾನೆ. ಇವತ್ತಿನ ಮಳೆ ಒಂದರೆಡು ದಿನಗಳ ಮಟ್ಟಿಗೆ ವಾತಾವರಣವನ್ನು ಕೊಂಚ ತಂಪು ಮಾಡಿರುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos