ಕಾಂಗ್ರೆಸ್ ಟಿಕೆಟ್ಗಾಗಿ ಕೊನೆವರೆಗೂ ಕಾಯುತ್ತೇನೆ: ಸುಮಲತಾ

ಕಾಂಗ್ರೆಸ್ ಟಿಕೆಟ್ಗಾಗಿ ಕೊನೆವರೆಗೂ ಕಾಯುತ್ತೇನೆ: ಸುಮಲತಾ

ಮೈಸೂರು, ಮಾ.8, ನ್ಯೂಸ್ ಎಕ್ಸ್ ಪ್ರೆಸ್: ಕಾಂಗ್ರೆಸ್ ಟಿಕೆಟ್‌ಗಾಗಿ ನಾನು ಲಾಸ್ಟ್ ಮಿನಿಟ್‌ವರೆಗೂ ಕಾಯುತ್ತೇನೆ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ.

ಇಂದು ನಗರದಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ‌ಸದ್ಯ ನಾನು ಟಿಕೆಟ್ ವಿಚಾರವಾಗಿ ಯಾರನ್ನೂ ಭೇಟಿ ಮಾಡಿಲ್ಲ. ಕೊನೆವರೆಗೂ ಕಾದು ನೋಡುತ್ತೇನೆ. ಒಂದೊಂದೇ ಹೆಜ್ಜೆ ಇಟ್ಟು ರಾಜಕೀಯಕ್ಕೆ ಬರುತ್ತಿದ್ದೇನೆ ಎಂದರು.

ಯಾರ ಬಗ್ಗೆಯೂ ಅವಮಾನಕರವಾದ ಮಾತುಗಳನ್ನು ಆಡಬೇಡಿ. ಅಭಿಮಾನಿಗಳೇ ವೈಯುಕ್ತಿಕ ಟೀಕೆ ಬೇಡ ಎಂದು ಅಭಿಮಾನಿಗಳಿಗೆ ಮನವಿ ಮಾಡಿದವರು, ಯಾವ ತಾಯಿಗೂ ನೋವಾಗುವಂತಹ ಮಾತುಗಳು ಬೇಡ. ನಿಖಿಲ್ ಜಾಗದಲ್ಲಿ ನನ್ನ ಮಗನನ್ನು ನಿಲ್ಲಿಸಿ ನೋಡುತ್ತೇನೆ. ನನ್ನ ಮಗನಿಗೆ ಬೈದಾಗ ಎಷ್ಟು ನೋವಾಗುತ್ತೋ, ಅಷ್ಟೇ ನೋವು ಆ ತಾಯಿಗೂ ಆಗುತ್ತೆ ಎಂದು ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos