62 ವರ್ಷ ಗಜ ಸಾವು

62 ವರ್ಷ ಗಜ ಸಾವು

ಕೊಲ್ಲೂರು, ಆ. 14 : ಇಂದಿರಾ ಎಂಬ ಹೆಸರಿನ ಆನೆಯೊಂದು ಮಂಗಳವಾರ ಮೃತ ಪಟ್ಟಿದೆ. ಇದು ಕೊಲ್ಲೂರು ಮೂ ಕಾಂಬಿಕಾ ದೇವಾಲಯದ ಆನೆ ಕಳೆದ ಮೂರು ದಿನದಿಂದ ಆನೆಗೆ ಜ್ವರ ಬಾಧಿಸಿತ್ತು. ಸ್ಥಳೀಯವಾಗಿ ಔಷಧೋಪಚಾರ ಮಾಡಿದರೂ ಜ್ವರ ಕಡಿಮೆಯಾಗದೆ ಉಲ್ಬಣಗೊಂಡ ಕಾರಣ ಮಂಗಳವಾರ ಸಕ್ರೆಬೈಲ್ನ ಆನೆ ವೈದ್ಯ ಡಾ| ವಿನಯ ಅವರನ್ನು ಕರೆಸಿ ಚಿಕಿತ್ಸೆ ನೀಡಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಆನೆ ರಾತ್ರಿ ವೇಳೆಗೆ ಕೊನೆಯುಸಿರೆಳೆಯಿತು.
ಆನೆಗೆ 22 ವರ್ಷಗಳ ಹಿಂದೆ ಬಾಳೆಹೊನ್ನೂರಿನ ಭಕ್ತರೋರ್ವರು ದೇಗುಲಕ್ಕೆ ಕಾಣಿಕೆ ರೂಪದಲ್ಲಿ ಅರ್ಪಿಸಿದ್ದರು. ಪ್ರಸ್ತುತ ಆನೆಗೆ 62 ವರ್ಷಗಳಾಗಿದ್ದು, ದೇಗುಲದಿಂದ ನಾಲ್ಕೈದು ಕಿ.ಮೀ. ದೂರದ ಕಲ್ಯಾಣಿ ಗುಡ್ಡೆಯಲ್ಲಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿತ್ತು.

ಫ್ರೆಶ್ ನ್ಯೂಸ್

Latest Posts

Featured Videos