ಕೋಳಿಮರಿಗಾಗಿ ಮರುಗಿದ ಆ ಮುದ್ದುಹುಡುಗನಿಗೆ ಶಾಲೆಯಿಂದ ಪ್ರಶಂಸೆ

ಕೋಳಿಮರಿಗಾಗಿ ಮರುಗಿದ ಆ ಮುದ್ದುಹುಡುಗನಿಗೆ ಶಾಲೆಯಿಂದ ಪ್ರಶಂಸೆ

ಸಾಯಿರಂಗ್, . 5, ನ್ಯೂಸ್ ಎಕ್ಸ್ ಪ್ರೆಸ್: (ಮಿಜೋರಾಂ): ಅಚಾನಕ್ಕಾಗಿ ತನ್ನ ಸೈಕಲ್ಲಿಗೆ ಸಿಕ್ಕು ಸತ್ತ ಕೋಳಿಮರಿಯನ್ನು ಹಿಡಿದು ಆಸ್ಪತ್ರೆಗೆ ತೆರಳಿ, ಅದನ್ನು ಬದುಕಿಸುವಂತೆ ಅಂಗಲಾಚಿದ ಮುಗ್ಧ ಹುಡುಗನಿಗೆ ಆತನ ಶಾಲೆಯಲ್ಲಿ ರಾಜಮರ್ಯಾದೆ ಸಿಕ್ಕಿದೆ.

ಅಂತರ್ಜಾಲ ಲೋಕದಲ್ಲಿ ತಲ್ಲಣ ಸೃಷ್ಟಿಸಿದ ಈ 6 ವರ್ಷ ವಯಸ್ಸಿನ ಡೆರೆಕ್ ಸಿ ಲಾಲ್ ಚಾನ್ಹಿಮಾನ ಮುಗ್ಧತೆಗೆ ಆತನ ಶಾಲೆಯಿಂದಲೂ ಪ್ರಶಂಸೆ ಸಿಕ್ಕಿದೆ.

ಹುಡುಗನ ಮಾನವೀಯ ಅಂತಃಕರಣ ಕಂಡು ಆತನಿಗೆ ಶಾಲೆ ಪ್ರಶಂಸಾ ಪತ್ರ ನೀಡಿ ಸನ್ಮಾನಿಸಿದೆ.

ದೆರೆಕ್ ಸಿ ಲಾಲ್ ಚಾನ್ಹಿಮಾ ಎಂಬ ಬಾಲಕ ತನ್ನ ಸೈಕಲ್ ಏರಿ ಶಾಲೆಗೆ ಹೊರಟಿದ್ದ ಸಂದರ್ಭದಲ್ಲಿ ಆತನ ಸೈಕಲ್ಲಿಗೆ ಕೋಳಿಮರಿಯೊಂದು ಅಡ್ಡಬಂದಿತ್ತು. ಅದು ತಕ್ಷಣವೇ ಸತ್ತೂ ಹೋಗಿತ್ತು. ಕೂಡಲೇ ಈ ಬಾಲಕ ಆ ಕೋಳಿಮರಿಯನ್ನು ತನ್ನ ಪುಟ್ಟ ಕೈಯಲ್ಲಿ ಹಿಡಿದು, ಮತ್ತೊಂದು ಕೈಯಲ್ಲಿ ತನ್ನ ಬಳಿ ಉಳಿತಾಯ ಮಾಡಿಟ್ಟುಕೊಂಡಿದ್ದ 10 ರೂ. ನೋಟನ್ನು ಹಿಡಿದು ಆಸ್ಪತ್ರೆಗೆ ಬಂದಿದ್ದ

ಆದರೆ ಕೋಳಿಮರಿ ಸತ್ತಿದೆ ಎಂದು ಹುಡುಗನಿಗೆ ತಿಳಿಸಿದ ಆಸ್ಪತ್ರೆ ಸಿಬ್ಬಂದಿ, ಆಸ್ಪತ್ರೆಗಳಲ್ಲಿ ಕೋಳಿಮರಿಗೆ ಚಿಕಿತ್ಸೆ ನೀಡೋಲ್ಲ ಎಂದಿದ್ದಾರೆ. ನಿರಾಸೆಯಿಂದ ಹುಡುಗ ವಾಪಸ್ಸಾಗಿದ್ದಾನೆ. ಆದರೆ ಈ ಹುಡು ಒಂದು ಕೈಯಲ್ಲಿ ಕೋಳಿಮರಿ, ಇನ್ನೊಂದು ಕೈಯಲ್ಲಿ ಹತ್ತು ರೂ ನೋಟು ಹಿಡಿದಿರುವ ಚಿತ್ರವನ್ನು ನರ್ಸ್ ವೊಬ್ಬರು ಕ್ಲಿಕ್ಕಿಸಿದ್ದಾರೆ. ಬಾಲಕನ ಮಾನವೀಯ ಅಂತಃಕರಣ, ಮುಗ್ಧತೆ ಕಂಡು ಆಸ್ಪತ್ರೆ ಸಿಬ್ಬಂದಿ ಆತನನ್ನು ಶ್ಲಾಘಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos