ಕೊಹ್ಲಿ ವಿರುದ್ಧ ಕ್ರಮಕೈಗೊಂಡ ಬಿಸಿಸಿಐ

ಕೊಹ್ಲಿ ವಿರುದ್ಧ ಕ್ರಮಕೈಗೊಂಡ ಬಿಸಿಸಿಐ

ಬೆಂಗಳೂರು: ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಿನ್ನೆ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ 36ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಕೊನೆಯ ಎಸೆತದಲ್ಲಿ 1 ರನ್‌ನಿಂದ ರೋಚಕ ಗೆಲುವು ಸಾಧಿಸಿದೆ.

ನಿನ್ನೆಯ ಪಂದ್ಯದಲ್ಲಿ ಅಂಪೈರ್ ನೀಡಿದ ತೀರ್ಪಿನ ಅಸಮಾಧಾನ ಹೊರಹಾಕಿದ್ದ ಕೊಹ್ಲಿ, ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದರು. ಹೀಗಾಗಿ ವಿರಾಟ್ ಕೊಹ್ಲಿ ಅವರ ಈ ನಡುವಳಿಕೆಯ ವಿರುದ್ಧ ಬಿಸಿಸಿಐ ಕ್ರಮ ಕೈಗೊಂಡಿದ್ದು, ಪಂದ್ಯ ಶುಲ್ಕದ 50 ಪ್ರತಿಶತ ಸಂಭಾವನೆಯನ್ನು ದಂಡವಾಗಿ ಪಾವತಿಸಬೇಕಾಗಿದೆ.

ಇದೀಗ ಅದರ ಫಲವಾಗಿ ವಿರಾಟ್ ಕೊಹ್ಲಿ ದಂಡದ ಭಾರ ಹೊರಬೇಕಾಗಿ ಬಂದಿದೆ. ವಾಸ್ತವವಾಗಿ ನಿನ್ನೆಯ ಪಂದ್ಯದಲ್ಲಿ ಅಂಪೈರ್ ನೀಡಿದ ತೀರ್ಪಿನ ಅಸಮಾಧಾನ ಹೊರಹಾಕಿದ್ದ ಕೊಹ್ಲಿ, ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದರು. ಹೀಗಾಗಿ ವಿರಾಟ್ ಕೊಹ್ಲಿ ಅವರ ಈ ನಡುವಳಿಕೆಯ ವಿರುದ್ಧ ಬಿಸಿಸಿಐ ಕ್ರಮ ಕೈಗೊಂಡಿದೆ.

ರಾಣಾ ಬೌಲ್ ಮಾಡಿದ ಆ ಎಸೆತ ನಿಧಾನಗತಿಯ ಫುಲ್ ಟಾಸ್‌ ಬಾಲ್ ಆಗಿತ್ತು. ಈ ವೇಳೆ ಚೆಂಡು ಕೊಹ್ಲಿಯ ಬ್ಯಾಟ್​ಗೆ ತಗುಲಿ ಮೇಲೆ ಹೋಯಿತು. ಬೌಲರ್ ಹರ್ಷಿತ್ ರಾಣಾ ಸುಲಭ ಕ್ಯಾಚ್ ತೆಗೆದುಕೊಂಡರು. ಅಂಪೈರ್ ಕೂಡ ಔಟೆಂದು ತೀರ್ಪು ನೀಡಿದರು. ಆದರೆ ಅಂಪೈರ್ ನಿರ್ಧಾರದ ವಿರುದ್ಧ ಶಾಕ್​ಗೆ ಒಳಗಾದ ಕೊಹ್ಲಿ, ರಿವ್ಯೂ ತೆಗೆದುಕೊಂಡರು. ಇಲ್ಲಿ ಮೂರನೇ ಅಂಪೈರ್ ಕೂಡ ಕೊಹ್ಲಿ ಔಟೆಂದು ತೀರ್ಪು ನೀಡಿದರು. ಇದರಿಂದ ಕೋಪಗೊಂಡ ಕೊಹ್ಲಿ, ಫೀಲ್ಡ್ ಅಂಪೈರ್​ ಜೊತೆ ಕೆಲ ಸಮಯ ವಾಗ್ವಾದ ನಡೆಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos