ಕೊಹ್ಲಿಯನ್ನು ಕೊಂಡಾಡಿದ ಬ್ರಿಯಾನ್ ಲಾರ

ಕೊಹ್ಲಿಯನ್ನು ಕೊಂಡಾಡಿದ ಬ್ರಿಯಾನ್ ಲಾರ

ನವದೆಹಲಿ, ಮೇ. 24, ನ್ಯೂಸ್ಎಕ್ಸ್ ಪ್ರೆಸ್‍: ಟೀಂ ಇಂಡಿಯಾ ನಾಯಕರ ವಿರಾಟ್ ಕೊಹ್ಲಿ ಮಾನವನಲ್ಲ, ರನ್ ಮಷಿನ್ ಎಂದು ವೆಸ್ಟ್ ಇಂಡೀಸ್ ಮಾಜಿ ಆಟಗಾರ ಬ್ರಿಯಾನ್ ಲಾರಾ  ಪ್ರಶಂಸಿದ್ದಾರೆ. ವಿರಾಟ್ ಕೊಹ್ಲಿ ಪಂದ್ಯದ ದಿಕ್ಕನ್ನೂ ಬದಲಿಸಬಲ್ಲ ಆಟಗಾರ. ಭಾರತ ತಂಡಕ್ಕೆ ವರದಾನವಾಗಲಿದ್ದಾರೆ. ಭಾರತ ತಂಡ ವಿಶ್ವಕಪ್ ಗೆಲ್ಲುವಲ್ಲಿ ಕೊಹ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ ಎಂದು ಹೇಳಿದ್ದಾರೆ.

ಏಕದಿನ ಪಂದ್ಯಗಳಲ್ಲೂ 11,000 ರನ್ ಹೊಡೆದಿರುವ ಕೊಹ್ಲಿ ಇಷ್ಟು ವರ್ಷದಲ್ಲಿ ಒಂದು ಬಾರಿಯೂ ಅವರು ತಮ್ಮ ದೈಹಿಕ ಸಾಮರ್ಥ್ಯ ವನ್ನು ಕಳೆದುಕೊಂಡಿಲ್ಲ. ಈ ಕಾರಣಕ್ಕೆ ಅವರನ್ನು ರನ್ ಮಷಿನ್ ಎಂದು ಕರೆದಿದ್ದೇನೆ ಎಂದು ಹೇಳಿದರು. ಭಾರತದ ಎಲ್ಲಾ ಆಟಗಾರರು ಉತ್ತಮ ಲಯದಲ್ಲಿದ್ದು ‘2019ರ’ ವಿಶ್ವಕಪ್ ಗೆಲ್ಲಲು ಇದು ಒಳ್ಳೆಯ ಅವಕಾಶ ಎಂದು ಬ್ರಿಯಾನ್ ಲಾರಾ ಕೊಂಡಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos