ಕೊಹ್ಲಿ-ಸೆಹ್ವಾಗ್ ಸನ್ಮಾನ ರದ್ದು: ಡೆಲ್ಲಿ ಕ್ರಿಕೆಟ್ ಸಂಸ್ಥೆಯಿಂದ ಮಾದರಿ ನಡೆ

ಕೊಹ್ಲಿ-ಸೆಹ್ವಾಗ್ ಸನ್ಮಾನ ರದ್ದು: ಡೆಲ್ಲಿ ಕ್ರಿಕೆಟ್ ಸಂಸ್ಥೆಯಿಂದ ಮಾದರಿ ನಡೆ

ನವದೆಹಲಿ,ಮಾ.12, ನ್ಯೂಸ್ ಎಕ್ಸ್ ಪ್ರೆಸ್: ಟೀಂ ಇಂಡಿಯಾ ಕ್ರಿಕೆಟ್ ನ ನಾಯಕರಾದ ವಿರಾಟ್ ಕೊಹ್ಲಿ, ವೀರೇಂದ್ರ ಸೆಹ್ವಾಗ್ ಹಾಗೂ ಗೌತಮ್ ಗಂಭೀರ್ಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮವನ್ನು ರದ್ದುಗೊಳಿಸಿದ ಡೆಲ್ಲಿ ಕ್ರಿಕೆಟ್ ಸಂಸ್ಥೆ, 10 ಲಕ್ಷವನ್ನು ಹಣವನ್ನು ದೆಹಲಿಯ ಹುತಾತ್ಮ ಯೋಧರಿಗೆ ನೀಡಲು ನಿರ್ಧರಿಸಿದೆ.

ಇದೇ ಮಾ.13, ರಂದು ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಏಕದಿನ ಪಂದ್ಯ ದೆಹಲಿಯ ಫಿರೋಜ್ ಷಾ ಕೊಟ್ಲಾ ಅಂಗಳದಲ್ಲಿ ನಡೆಯಲಿದ್ದು, ಈ ವೇಳೆ ಕ್ರಿಕೆಟ್ ದೈತ್ಯರನ್ನು ಸನ್ಮಾನಿಸಲು ಡಿಡಿಸಿಎ ನಿರ್ಧರಿಸಿತ್ತು. ಆದರೆ, ಐಪಿಎಲ್ ಉದ್ಘಾಟನಾ ಸಮಾರಂಭವನ್ನು ರದ್ದುಗೊಳಿಸಿದ ಬಿಸಿಸಿಐ ಆ ಮೊತ್ತವನ್ನು ಹುತಾತ್ಮ ಯೋಧರ ಕುಟುಂಬಗಳಿಗೆ ನೀಡುವುದಾಗಿ ಘೋಷಿಸಿತ್ತು. ಡೆಲ್ಲಿ ಕ್ರಿಕೆಟ್ ಸಂಸ್ಥೆ ಇದೇ ಮೊದಲ ಬಾರಿ ತನ್ನ ರಾಜ್ಯದ ಎಲ್ಲಾ ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರಿಗೆ ಪಂದ್ಯಕ್ಕೆ ವಿಐಪಿ ಪಾಸ್ ವಿತರಿಸಿದೆ.

ಫೆ. 14ರಂದು ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಭಾರದ 44 ಸಿಆರ್’ಪಿಎಫ್ ಯೋಧರು ಹುತಾತ್ಮರಾಗಿದ್ದರು. ಟೀಂ ಇಂಡಿಯಾ ಕೂಡಾ ಭಾರತೀಯ ಸೇನೆಗೆ ಗೌರವ ಸೂಚಕವಾಗಿ ರಾಂಚಿ ಏಕದಿನ ಪಂದ್ಯದಲ್ಲಿ ಆರ್ಮಿ ಕ್ಯಾಪ್ ತೊಟ್ಟು ಕಣಕ್ಕಿಳಿದಿತ್ತು. ಅಲ್ಲದೇ ಪಂದ್ಯದ ಪೂರ್ಣ ಸಂಭಾವನೆಯನ್ನು ಸೇನಾ ನಿಧಿಗೆ ನೀಡಿತ್ತು.

 

ಫ್ರೆಶ್ ನ್ಯೂಸ್

Latest Posts

Featured Videos