13 ರಂದು ಕೊಡಗಿನಲ್ಲಿ ಭಾರಿ ಮಳೆ

13 ರಂದು ಕೊಡಗಿನಲ್ಲಿ ಭಾರಿ ಮಳೆ

ಮಡಿಕೇರಿ, ಜೂನ್.11, ನ್ಯೂಸ್ ಎಕ್ಸ್ ಪ್ರೆಸ್: ಕೊಡಗಿನಲ್ಲಿ ಜೂನ್ 13 ರವರೆಗೆ ಭಾರೀ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಜಿಲ್ಲೆಯ ಜನರಿಗೆ ಸುರಕ್ಷಿತವಾಗಿರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

ಅಲ್ಲದೆ ಮುನ್ನೆಚ್ಚರಿಕೆಯಿಂದಿರಿ, ತುರ್ತು ಪರಿಸ್ಥಿತಿಯಲ್ಲಿ ಕಂಟ್ರೋಲ್ ರೂಮ್‍ಗೆ ಮಾಹಿತಿ ನೀಡಿ ಎಂದು ಸಾರ್ವಜನಿಕರಲ್ಲಿ ಕೊಡಗು ಡಿಸಿ ಅನೀಸ್ ಕಣ್ಮನಿ ಜಾಯ್ ಅವರು ಮನವಿ ಮಾಡಿದ್ದಾರೆ. ಅಲ್ಲದೆ ಜೂನ್ 13ರವರೆಗೆ ಮಳೆರಾಯನ ಆರ್ಭಟ ಜೋರಾಗಿರುವ ಸಾಧ್ಯತೆ. ಜೂನ್ 14 ರಿಂದ 29 ರವರೆಗೆ ಮಳೆಯ ಪ್ರಮಾಣ ಕಡಿಮೆಯಾಗಿರುತ್ತದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos