KMF ಉತ್ಪನ್ನಗಳಿಗೆ ಭಾರಿ ಬೇಡಿಕೆ

KMF ಉತ್ಪನ್ನಗಳಿಗೆ ಭಾರಿ ಬೇಡಿಕೆ

ಬೆಂಗಳೂರು:  ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿದೆ.‌ ಹೀಗಾಗಿ ಜನರು ಮೊಸರು, ಮಜ್ಜಿಗೆ ತೆಗದುಕೊಳ್ಳಲು  ಮುಂದಾಗುತ್ತಿದ್ದು, ಈ ವರ್ಷದ ಬೇಸಿಗೆಯಲ್ಲಿ‌‌ ಕರ್ನಾಟಕ ಹಾಲು ಒಕ್ಕೂಟ​ಗೆ ಭರ್ಜರಿ ವ್ಯಾಪಾರವಾಗುತ್ತಿದೆ.

ಬಿಸಿಲಿನ ತಾಪ ತಾಳಲಾರದೆ ಸಿಲಿಕಾನ್‌ ಸಿಟಿ ಮಂದಿ ತಂಪು ಪಾನಿಯಗಳತ್ತ ಮುಖ ಮಾಡುತ್ತಿದ್ದಾರೆ. ಹಣ್ಣಿನ ಜ್ಯೂಸ್​ಗಳ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಕೆಎಂಎಫ್​​ನ ನಂದಿನಿ ಮೊಸರು, ಮಜ್ಜಿಗೆ, ಐಸ್ ಕ್ರೀಮ್​ಗಳಿಗೆ ಫುಲ್ ಡಿಮ್ಯಾಂಡ್ ಬಂದಿದೆ. ಒಂದೇ ದಿನ ಬೆಂಗಳೂರಿನಲ್ಲಿ 16 ಲಕ್ಷ ಲೀಟರ್​ ಮೊಸರು ಮಾರಾಟವಾಗಿದ್ದು, ಕೆಎಂಎಫ್ ಇತಿಹಾಸದಲ್ಲೇ ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿದೆ.

ಒಟ್ಟಿನಲ್ಲಿ, ಬಿಸಿಲು ಜಾಸ್ತಿಯಾಗಿರುವುದರಿಂದ ತಂಪು ಪಾನಿಯಗಳ ಬೆಲೆ ಗಗನಕ್ಕೆ ಏರಿಕೆಯಾಗಿದ್ದು, ಬೆಲೆ ಕಡಿಮೆ ಇರುವ ನಂದಿನಿ ಉತ್ಪನ್ನಗಳಿಗೆ ಜನರು ಡಿಮ್ಯಾಂಡ್ ಮಾಡುತ್ತಿದ್ದು, ಈ ವರ್ಷ ಬೇಸಿಗೆಯಲ್ಲಿ ಕೆಎಂಎಫ್ ಹೊಸ ದಾಖಾಲೆಯನ್ನು ಬರೆದಿದೆ.

ಫ್ರೆಶ್ ನ್ಯೂಸ್

Latest Posts

Featured Videos