ಕೆ ಎಂಎಫ್ ಅಧ್ಯಕ್ಷರ ಸ್ಥಾನಕ್ಕೆ ಜಾರಕಿಹೊಳಿ

ಕೆ ಎಂಎಫ್ ಅಧ್ಯಕ್ಷರ ಸ್ಥಾನಕ್ಕೆ ಜಾರಕಿಹೊಳಿ

ಬೆಂಗಳೂರು, ಆ.31 :ಕೆ ಎಂಎಫ್ ಚುನಾವಣೆಯಲ್ಲಿ, ಬಿಜೆಪಿಯ ಬಾಲಚಂದ್ರ ಜಾರಕಿಹೊಳಿ ಗೆದ್ದು ಅಧ್ಯಕ್ಷರಾಗುವುದು ಬಹುತೇಕ ಖಚಿತ. 15 ವರ್ಷಗಳಿಂದ KMF ಅಧ್ಯಕ್ಷರಾಗಿದ್ದ ಎಚ್. ಡಿ. ರೇವಣ್ಣ ಚುನಾವಣೆಗೆ ಕೆಲವೇ ಗಂಟೆಗಳು ಬಾಕಿ ಇದೆ ಎನ್ನುವಷ್ಟರಲ್ಲಿ ತಮ್ಮ ನಾಮಪತ್ರ ಹಿಂಪಡೆದಿದ್ದಾರೆ.
ಇಂದು ಶನಿವಾರ ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಚಾಲಚಂದ್ರ ಜಾರಕಿಹೊಳಿ ಗೆಲುವು ಸಾಧಿಸುತ್ತಾರೆಂಬ ಅನುಮಾನ ವ್ಯಕ್ತವಾಗಿತ್ತು. ಕೆ ಎಂಎಫ್ನ 19 ನಿರ್ದೆಶಕರ ಪೈಕಿ, ಜಾರಕಿಹೊಳಿ ತಾವೂ ಸೇರಿದಂತೆ ಒಟ್ಟು 12 ಮಂದಿಯ ಬೆಂಬಲ ಪಡೆಯುವಲ್ಲಿ ಯಶಸ್ವಿಯಾಗಿದ್ದರು. 15 ವರ್ಷಗಳಿಂದಕೆ ಎಂಎಫ್ ಆಳಿದ್ದ ರೇವಣ್ಣ ಸೋಲುವ ಭೀತಿ ಎದುರಾಗಿತ್ತು.

ಫ್ರೆಶ್ ನ್ಯೂಸ್

Latest Posts

Featured Videos