ಕಲಬುರಗಿ ಮಹಾನಗರ ಪಾಲಿಕೆ ಮುಡಿಗೆ ಸ್ಕೋಚ್ ಗೋಲ್ಡ್

ಕಲಬುರಗಿ ಮಹಾನಗರ ಪಾಲಿಕೆ ಮುಡಿಗೆ ಸ್ಕೋಚ್ ಗೋಲ್ಡ್

ಕಲಬುರಗಿ, ಸೆ. 26 : ಜಿಲ್ಲೆಯ ಮಹಾನಗರ ಪಾಲಿಕೆಗೆ ಸ್ವಚ್ಛ ಸರ್ವೇಕ್ಷಣಾ ಅಭಿಯಾನದಲ್ಲಿ ಪ್ರತಿಷ್ಠಿತ ಸ್ಕೋಚ್ ಗೋಲ್ಡ್ ಪ್ರಶಸ್ತಿ ಲಭಿಸಿದೆ. ಸ್ವಚ್ಛ ಸರ್ವೇಕ್ಷಣಾ ಅಭಿಯಾನದ ಭಾಗ ದೆಹಲಿಯ ಸಂಸ್ಥೆ ಪ್ರತಿಷ್ಠಿತ ಸ್ಕೋಚ್ ಗೋಲ್ಡ್ ಪ್ರಶಸ್ತಿ ನೀಡುತ್ತದೆ. ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ವಾರ್ಡ್ವಾರು ಸಣ್ಣ ಯೋಜನೆಗಳ ಅನುಷ್ಠಾನ ಸಂಬಂಧ ಪ್ರಶಸ್ತಿ ನೀಡಲಾಗುತ್ತದೆ. ಹಿಂದೆ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ಬಿ.ಫೌಜಿಯಾ ತರನ್ನುಮ್ ಅವರು ಈ ಸ್ಪರ್ಧೆಗೆ ಕಲಬುರಗಿ ಮಹಾನಗರ ಪಾಲಿಕೆಯನ್ನು ನೊಂದಾಯಿಸಿದ್ದರು.
ಸ್ವತಃ ದೆಹಲಿಗೆ ತೆರಳಿ ಕಲಬುರಗಿ ಮಹಾನಗರ ಪಾಲಿಕೆ ಸಾಧನೆ ಬಗ್ಗೆ ಬಿ.ಫೌಜಿಯಾ ತರನ್ನುಮ್ ಮಾಹಿತಿ ನೀಡಿದ್ದರು. ಸಾಮಾಜಿಕ ಜಾಲತಾಣಗಳ ಮೂಲಕ ಈ ಸ್ಪರ್ಧೆಯ ಮತದಾನ ಮಾಡಲು ಜನಜಾಗೃತಿ ಮೂಡಿಸಲಾಗಿತ್ತು. ಮಂಗಳವಾರ ನವದೆಹಲಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದ್ದು, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಡಾ.ರಮೇಶ್ ಪೋಖ್ರಿಯಾಲ್ ಅವರು ಕಲಬುರಗಿ ಮಹಾನಗರ ಪಾಲಿಕೆಗೆ ಪ್ರತಿಷ್ಠಿತ ಸ್ಕೋಚ್ ಗೋಲ್ಡ್ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos