ಕಿವಿ ಫ್ರೂಟ್ಸ್ ತಿನ್ನೋದ್ರಿಂದ ಏನೆಲ್ಲಾ ಉಪಯೋಗ?

ಕಿವಿ ಫ್ರೂಟ್ಸ್ ತಿನ್ನೋದ್ರಿಂದ ಏನೆಲ್ಲಾ ಉಪಯೋಗ?

ಕಿವಿ ಪ್ರೂಟ್ಸ್ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದೋರು ಕೂಡ ಕಿವಿ ಹಣ್ಣನ್ನು ಇಷ್ಟ ಪಡುತ್ತಾರೆ. ತನ್ನ ಆಕರ್ಷಣೀಯ ಬಣ್ಣದಿಂದಲೂ ಕೂಡ ಕಿವಿ ಪ್ರೂಟ್ಸ್ ಜನರ ಗಮನ ಸೆಳೆಯುತ್ತದೆ. ಸಿಹಿ ಜೊತೆಯಲ್ಲೇ ಹುಳಿ ಹುಳಿ ಟೇಸ್ಟ್ ಎಂತವರ ಬಾಯಲ್ಲೂ ನೀರು ತರಿಸೋದು ಗ್ಯಾರಂಟಿ. ಈ ಕಿವಿ ಪ್ರೂಟ್ಸ್ನ್ನು ಸೇವಿಸೋದ್ರಿಂದ ಆರೋಗ್ಯಕ್ಕೆ 14 ರೀತಿ ಉಪಯೋಗವಾಗುತ್ತವೆ. ಇದರಿಂದ ಏನ್ ಯೂಸ್ ಆಗುತ್ತೆ ಅಂತಾ ನೀವು ತಿಳ್ಕೋ ಬೇಕಾ.. ಹಾಗಾದ್ರೆ ಈ ಸ್ಟೋರಿ ಓದಲೇ ಬೇಕು.

ಕಿವಿ ಪ್ರೂಟ್ಸ್ನಿಂದ ಆರೋಗ್ಯಕ್ಕೆ 14 ರೀತಿ ಪ್ರಯೋಜನ

1.ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ: ಕೆಲವರಿಗೆ ತಿಂದ ಆಹಾರವೆಲ್ಲ ಜೀರ್ಣವಾಗೋದಿಲ್ಲ. ಮಲಬದ್ಧತೆಯಿಂದ ಬಳಲುತ್ತಿರುತ್ತಾರೆ. ಅಂತವರು ಈ ಕಿವಿ ಪ್ರೂಟ್ನ ಸೇವಿಸೋದ್ರಿಂದ ದೇಹದಲ್ಲಿ ಪಚನ ಕ್ರಿಯೆ ಸರಿಯಾಗುವಂತೆ ಮಾಡಲು ಸಹಾಯ ಮಾಡುತ್ತದೆ.

2. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ: ತುಂಬಾ ಜನರು ರಕ್ತದೊತ್ತಡಿಂದ ಬಳಲುತ್ತಿರುತ್ತಾರೆ. ಅಂತವರು ಈ ಕಿವಿ ಪ್ರೂಟ್ ತಿನ್ನುವುದರಿಂದ ಪೋಟಾಷಿಯಮ್, ಸೋಡಿಯಂನ್ನು ನಿಯಂತ್ರಿಸಲು ಸಹಾಯಕಾರಿಯಾಗುತ್ತೆ.

3. ಡಿಎನ್ಎ ಡ್ಯಾಮೇಜ್ ತಡೆಯುತ್ತದೆ: ಕಿವಿ ಫ್ರೂಟ್ನಲ್ಲಿರುವ ಌಂಟಿ ಆಕ್ಸಿಡೆಂಟ್ನ ವಿಶೇಷ ಕಾಂಬಿನೇಷನ್, ಜೀವಕೋಶದ ಡಿಎನ್ಎ ಡ್ಯಾಮೇಜ್ ಆಗದಂತೆ ತಡೆಯುತ್ತೆ. ಕೆಲ ತಜ್ಞರು ಕ್ಯಾನ್ಸರ್ ತಡೆಯುವುದಕ್ಕೂ ಸಹಕಾರಿ ಅಂತ ಹೇಳ್ತಾರೆ.

4. ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ: ದೇಹಕ್ಕೆ ನಾವು ಎಷ್ಟು ಆಹಾರ ತಿಂದರೇನು. ನಮಗೆ ರೋಗ ನಿರೋಧಕ ಶಕ್ತಿ ತುಂಬಾನೆ ಮುಖ್ಯವಾಗುತ್ತೆ. ಕಿವಿ ಪ್ರೂಟ್ಸ್ ಸೇವನೆ ಮಾಡೋದ್ರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

5. ತೂಕ ಇಳಿಸಲು ಸಹಾಯಕಾರಿ: ತುಂಬಾ ಜನರು ವೇಟ್ ಲಾಸ್ ಮಾಡ್ಕೋ ಬೇಕು ಅಂತಾ ಇನ್ನಿಲ್ಲದ ಕಸರತ್ತು ಮಾಡ್ತಾನೆ ಇರ್ತಾರೆ. ಜಿಮ್ ಜೊತೆ ಡಯಟ್ ಮೊರೆ ಕೂಡ ಹೋಗುತ್ತಾರೆ. ಅಂಥವರು ಈ ಕಿವಿ ಪ್ರೂಟ್ಸ್ನ್ನು ತಿನ್ನೋದ್ರಿಂದ ಸುಲಭವಾಗಿ ತೂಕವನ್ನು ಇಳಿಸಿಕೊಳ್ಳಬಹುದು.

6. ಕರುಳಿನ ಸಮಸ್ಯೆಗಳನ್ನೂ ನಿವಾರಿಸುತ್ತೆ: ಕಿವಿ ಪ್ರೂಟ್ಸ್ನಲ್ಲಿ ಉತ್ತಮವಾದ ಫೈಬರ್ ಸತ್ವ ಇದೆ. ಇದು ಮಲಬದ್ಧತೆ ಹಾಗೂ ಕರುಳಿನ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

7. ಅನವಶ್ಯಕ ಬ್ಯಾಕ್ಟೀರಿಯಾ ತೊಲಗಿಸಲು ಸಹಾಯ: ನಾವು ತಿಂದ ಕೆಲವು ಆಹಾರ ಪದಾರ್ಥಗಳು ದೇಹದಲ್ಲಿ ಬೇಡ ಅಂದ್ರೂ ಉಳಿದುಕೊಂಡು ಬಿಡುತ್ತವೆ. ಅವುಗಳಿಂದ ಅನೇಕ ಕಾಯಿಲೆಗಳು ಕೂಡ ಬರುತ್ತವೆ. ಇಂತ ಅನವಶ್ಯಕ ಬ್ಯಾಕ್ಟೀರಿಯಾಗಳನ್ನು ದೇಹದಿಂದ ಕಿತ್ತು ಹಾಕಲು ಕಿವಿ ಪ್ರೂಟ್ಸ್ ಸಹಾಯ ಮಾಡುತ್ತದೆ.

8. ಹೃದಯದ ಆರೋಗ್ಯವನ್ನು ಕಾಪಾಡುತ್ತದೆ: ಪ್ರತಿದಿನ 2 ರಿಂದ 3 ಕಿವಿ ಪ್ರೂಟ್ಸ್ ತಿನ್ನೋದ್ರಿಂದ ಶೇಕಡಾ 18ರಷ್ಟು ರಕ್ತ ಹೆಪ್ಪು

ಗಟ್ಟುವುದನ್ನು ತಡೆಗಟ್ಟುತ್ತದೆ. ರಕ್ತ ಹೆಪ್ಪುಗಟ್ಟೋದನ್ನು ತಡೆಯಲು ಅನೇಕರು ಆಸ್ಪಿರಿನ್ ತೆಗೆದುಕೊಳ್ಳುತ್ತಾರೆ. ಇದರಿಂದ ಸೈಡ್ ಎಫೆಕ್ಟ್ ಆಗೋದು ಜಾಸ್ತಿ. ಆದ್ರೆ ಕಿವಿ ಪ್ರೂಟ್ಸ್ ಸೇವನೆ ಮಾಡೋದ್ರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ.

9. ಮಧುಮೇಹ ಇರೋರು ಸೇವಿಸಬಹುದು: ಸಕ್ಕರೆ ಕಾಯಿಲೆ ಇರೋರು ಹಣ್ಣುಗಳನ್ನು ತಿನ್ನೋದಕ್ಕೆ ಹಿಂದೂ ಮುಂದು ಮಾಡ್ತಾರೆ. ಅದರಲ್ಲಿನ ಸಕ್ಕರೆ ಅಂಶದಿಂದ ತೊಂದರೆಯಾಗುತ್ತೆ ಅಂತಾ ಯೋಚಿಸುತ್ತಾರೆ. ಆದ್ರೆ ಕಿವಿ ಪ್ರೂಟ್ಸ್ನ್ನು ಧೈರ್ಯವಾಗಿ ಮಧುಮೇಹಿಗಳು ಸೇವನೆ ಮಾಡಬಹುದು. ಇದು ದೇಹದಲ್ಲಿನ ಸಕ್ಕರೆ ಪ್ರಮಾಣವನ್ನು ಹೆಚ್ಚಿಸೋದಿಲ್ಲ.

10.ದೃಷ್ಠಿ ದೋಷವನ್ನು ನಿವಾರಿಸುತ್ತದೆ: ಪ್ರತಿದಿನ 3 ಅದಕ್ಕಿಂತಲೂ ಹೆಚ್ಚು ಕಿವಿ ಪ್ರೂಟ್ಸ್ನ್ನು ತಿನ್ನೋದ್ರಿಂದ ದೃಷ್ಟಿ ದೋಷ ನಿವಾರಣೆಯಾಗುತ್ತದೆ ಅನ್ನೋದು ಸಂಶೋಧನೆಯಿಂದ ಸಾಬೀತಾಗಿದೆ. ದೃಷ್ಟಿ ದೋಷ ಇರೋ 1 ಲಕ್ಷದ 10 ಸಾವಿರ ಪುರುಷರು ಮತ್ತು ಮಹಿಳೆಯರ ಅಧ್ಯಯನ ನಡೆಸಿದ್ದು, ಅವರೆಲ್ಲರೂ ಪ್ರತಿದಿನ 3 ಅದಕ್ಕೂ ಹೆಚ್ಚು ಕಿವಿ ಪ್ರೂಟ್ಸ್ ಸೇವನೆ ಮಾಡಿದ್ದಾರೆ. ಅವರಲ್ಲಿ ಶೇಕಡಾ 36ರಷ್ಟು ದೃಷ್ಟಿ ದೋಷ ಕಡಿಮೆಯಾಗಿದೆ.

11. ದೇಹದ ಆರೋಗ್ಯವನ್ನು ಸಮತೋಲನದಲ್ಲಿಡುತ್ತೆ: ಕಿವಿ ಪ್ರೂಟ್ಸ್ ತಿನ್ನೋದ್ರಿಂದ ದೇಹಕ್ಕೆ ಬೇಕಾದ ಖನಿಜಾಂಶಗಳು ಹೇರಳವಾಗಿ ಸಿಗುತ್ತವೆ. ಇದರಿಂದ ತಾರುಣ್ಯ ಪೂರ್ಣ ತ್ವಚೆ, ಸುಖ ನಿದ್ರೆ, ಸಂಧಿವಾತ, ಶೀತವನ್ನು ಕಡಿಮೆ ಮಾಡಬಹುದು.

12. ಚರ್ಮದ ಆರೋಗ್ಯವನ್ನು ಕಾಪಾಡುತ್ತೆ: ಕಿವಿ ಹಣ್ಣಿನಲ್ಲಿ ಹೆಚ್ಚಾಗಿ ವಿಟಮಿನ್ ಇ ಇದೆ. ಇದು ನಮ್ಮ ಚರ್ಮ ರೋಗದಿಂದ ರಕ್ಷಿಸಲು ಸಹಾಯ ಮಾಡುತ್ತದೆ.

13. ಹೆಚ್ಚಿನ ರುಚಿಯನ್ನು ಹೊಂದಿರುವ ಹಣ್ಣು: ಕಿವಿ ಪ್ರೂಟ್ಸ್ ನೋಡಲು ಚೆನ್ನಾಗಿದೆ. ಬಹಳ ಬೇಗ ಮಕ್ಕಳನ್ನು ಇದು ಆಕರ್ಷಿಸುತ್ತದೆ. ಈ ಹಣ್ಣು ತಿನ್ನಲು ತುಂಬಾನೆ ಟೇಸ್ಟಿಯಾಗಿರುತ್ತೆ.

14. ಹಣ್ಣಿಗೆ ಹೆಚ್ಚಿನ ಕೀಟನಾಶಕ ಬಳಸುವುದಿಲ್ಲ: ಹಣ್ಣುಗಳಿಗೆ ರೋಗ ಬೀಳಬಾರ್ದು ಅಂತಾ ಹೇರಳವಾಗಿ ಕೀಟನಾಶಕ ಸಿಂಪಡಿಸಿರುತ್ತಾರೆ. ಆದ್ರೆ ಕಿವಿ ಪ್ರೂಟ್ಸ್ಗೆ ಹೆಚ್ಚಾಗಿ ಕೀಟನಾಶಕ ಬಳಸೋದಿಲ್ಲ. 2016ರ ಸುರಕ್ಷಿತ ಆಹಾರಗಳ ಪಟ್ಟಿಯಲ್ಲಿ ಕಿವಿ ಪ್ರೂಟ್ಸ್ ಕೂಡ ಇದೆ.

ಫ್ರೆಶ್ ನ್ಯೂಸ್

Latest Posts

Featured Videos