ಕಿಸ್ಸಿಂಗ್ ಸೀನ್ ಪ್ರಶ್ನಿಸಿದಕ್ಕೆ ಶಾಹಿದ್ ಕಪೂರ್ ಗರಂ!

ಕಿಸ್ಸಿಂಗ್ ಸೀನ್  ಪ್ರಶ್ನಿಸಿದಕ್ಕೆ ಶಾಹಿದ್ ಕಪೂರ್ ಗರಂ!

ಮುಂಬೈ, ಮೇ. 16, ನ್ಯೂಸ್ಎಕ್ಸ್ ಪ್ರೆಸ್‍:  ನಟ ಶಾಹಿದ್ ಕಪೂರ್ ನಟಿಸಿದ  ‘ಕಬೀರ್ ಸಿಂಗ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಕಿಸ್ಸಿಂಗ್ ಸೀನ್ ಗಳಿದ್ದು, ಮಾಧ್ಯಮದವರು ಈ ಬಗ್ಗೆ ನಟಿ ಕೈರಾ ಅಡ್ವಾನಿಯನ್ನು ಪ್ರಶ್ನಿಸಿದ್ದಕ್ಕೆ ಶಾಹಿದ್ ಕಪೂರ್ ಗರಂ  ಆಗಿದ್ದಾರೆ.

ಟ್ರೈಲರ್ ಲಾಂಚ್ ಸಂದರ್ಭದಲ್ಲಿ ವರದಿಗಾರರೊಬ್ಬರು, “ಈ ಚಿತ್ರದಲ್ಲಿ ನಿಮ್ಮ ಹಾಗೂ ಶಾಹಿದ್ ನಡುವೆ ಒಟ್ಟು ಎಷ್ಟು ಕಿಸ್ಸಿಂಗ್ ಸೀನ್ ಇದೆ” ಎಂದು ಕೈರಾರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಕೈರಾ “ನಾನು ಎಷ್ಟು ಕಿಸ್ ಮಾಡಿದೆ ಎಂದು ಎಣಿಸಲಿಲ್ಲ” ಎಂದು ನಗುತ್ತಾ ಉತ್ತರಿಸಿದ್ದಾರೆ.  ಆಗ ಶಾಹಿದ್ ನಿಮಗೆ ದೀರ್ಘಕಾಲದ ಗೆಳತಿ ಇಲ್ಲವಾ? ನೀವು ಕಿಸ್ ಹೊರತಾಗಿ ಬೇರೆ ವಿಷಯದ ಬಗ್ಗೆ ಪ್ರಶ್ನಿಸಲು ಆಗಲ್ವಾ? ಈ ಚಿತ್ರದಲ್ಲಿ ನಾವು ಸಾಕಷ್ಟು ನಟನೆ ಕೂಡ ಮಾಡಿದ್ದೇವೆ ಎಂದು ವರದಿಗಾರನ ವಿರುದ್ಧ ಕೋಪಗೊಂಡಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos