ಲೋಕಸಭಾ ಚುನಾವಣೆಯ ಮುನ್ನವೇ ರೈತರ ಖಾತೆಗೆ ಹಣ ಸೇರಲಿದೆ!

ಲೋಕಸಭಾ ಚುನಾವಣೆಯ ಮುನ್ನವೇ ರೈತರ ಖಾತೆಗೆ ಹಣ ಸೇರಲಿದೆ!

ಬೆಂಗಳೂರು, ಮಾ, 25, ನ್ಯೂಸ್ ಎಕ್ಸ್ ಪ್ರೆಸ್: ಕೇಂದ್ರ ಸರ್ಕಾರ ತನ್ನ ಕೊನೆಯ ಬಜೆಟ್ ನಲ್ಲಿ ರೈತರಿಗೆ ವಾರ್ಷಿಕ ರೂ. 6,000 ಸಹಾಯಧನ ನೀಡುವ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯನ್ನು ಘೋಷಣೆ ಮಾಡಿತ್ತು. ಮಧ್ಯಂತರ ಬಜೆಟ್‌ನಲ್ಲಿ 75 ಸಾವಿರ ಕೋಟಿ ಮೊತ್ತವನ್ನು ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆಗಾಗಿ ಪ್ರಕಟಿಸಲಾಗಿತ್ತು. ಲೋಕಸಭಾ ಚುನಾವಣೆಯ ಮುನ್ನವೇ ರೈತರ ಖಾತೆಗೆ ಹಣ ಸೇರಲಿದೆ!   4.74 ಕೋಟಿ ರೈತರಿಗೆ 2ನೇ ಕಂತಿನ ಫಲ ಕೇಂದ್ರ ಸರ್ಕಾರ ಪಿಎಂ ಕಿಸಾನ್ ಯೋಜನೆಯ 2ನೇ ಕಂತನ್ನು ಮುಂದಿನ ತಿಂಗಳು ವಿತರಿಸಲಿದ್ದು, ಏಪ್ರಿಲ್‌ ತಿಂಗಳಿನಲ್ಲಿ ಸುಮಾರು 4.74 ಕೋಟಿ ಸಣ್ಣ ಮತ್ತು ಮಧ್ಯಮ ರೈತರು ಎರಡನೇ ಕಂತಿನಲ್ಲಿ ತಲಾ ರೂ. 2,000 ಸಹಾಯಧನ ಪಡೆಯಲಿದ್ದಾರೆ ಎಂದು ಹೇಳಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos