ಡೈಲಾಗ್ ಕಿಂಗ್ ನ ಪುತ್ರ ಸ್ಯಾಂಡಲ್ವುಡ್ಗೆ ಎಂಟ್ರಿ

ಡೈಲಾಗ್ ಕಿಂಗ್ ನ ಪುತ್ರ ಸ್ಯಾಂಡಲ್ವುಡ್ಗೆ ಎಂಟ್ರಿ

ಬೆಂಗಳೂರು, ಜು. 19: ತಮ್ಮ ಡೈಲಾಗ್ ಡೆಲಿವರಿಯಿಂದಲೇ ಅಪಾರ ಅಭಿಮಾನಿ ಬಳಗವನ್ನ ಹೊಂದಿದವರು ನಟ ಸಾಯಿಕುಮಾರ್. ಅವರ ಸಹೋದರ ರವಿಶಂಕರ್ ಸಹ ಬಹು ಬೇಡಿಕೆಯ ನಟ. ಸಹೋದರರಿಬ್ಬರು ಸ್ಯಾಂಡಲ್ವುಡ್, ಟಾಲಿವುಡ್ ಮತ್ತು ಕಾಲಿವುಡ್ನಲ್ಲಿ ಅಪಾರ ಅಭಿಮಾನ ಬಳಗವನ್ನ ಹೊಂದಿದ್ದಾರೆ. ಇದೀಗ ಅವರ ಕುಟುಂಬದಿಂದಲೇ ಮತ್ತೊಬ್ಬ ನಟ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.

ಡೈಲಾಗ್ ಕಿಂಗ್ ಸಾಯಿಕುಮಾರ್ ರ ಪುತ್ರ ಆದಿ ಈಗಾಗಲೇ ತೆಲುಗು ಚಿತ್ರಗಳಲ್ಲಿ ನಟಿಸಿ ಒಳ್ಳೆಯ ಹೆಸರು ಗಳಿಸಿದ್ದಾರೆ. ಇತ್ತೀಚೆಗಷ್ಟೇ ಆದಿ ನಾಯಕನಾಗಿ ನಟಿಸಿರುವ, ಚುಟ್ಟಾಲಬ್ಬಾಯಿ ಚಿತ್ರ ಟಾಲಿವುಡ್ನಲ್ಲಿ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಂಡಿದೆ. ಇದೇ ಚಿತ್ರ ಇದೀಗ ಕನ್ನಡಕ್ಕೆ ಡಬ್ಬಿಂಗ್ಗೆ ಸಿದ್ದತೆ ನಡೆಯುತ್ತಿದೆ ಅಂತ ತಿಳಿದುಬಂದಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆಯಷ್ಟೇ ಇದೆ. ಈ ಸಿನಿಮಾ ಮೂಲಕ ಆದಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಈ ಚಿತ್ರದಲ್ಲಿ ಸಾಯಿಕುಮಾರ್ ಸಹ ನಟಿಸಿದ್ದಾರೆ. ತಂದೆಯ ಜೊತೆ ನಟಿಸಿದ ಚಿತ್ರದ ಮೂಲಕ ಕನ್ನಡಕ್ಕೆ ಬರಲಿರೋ ಆದಿಯನ್ನ ಕನ್ನಡದ ಪ್ರೇಕ್ಷಕರು ಹೇಗೆ ಸ್ವಾಗತಿಸುತ್ತಾರೆ ಅನ್ನೋದನ್ನ ಕಾದು ನೋಡಬೇಕು.

ಫ್ರೆಶ್ ನ್ಯೂಸ್

Latest Posts

Featured Videos