ಮಲಗಿದ್ದ ಕಂದಮ್ಮ ಕಿಡ್ನಾಪ್

ಲಕ್ನೋ, ಅ. 9 : ಇತ್ತೀಚೆಗೆ  ಉತ್ತರ ಪ್ರದೇಶ ಗಲ್ಶಹೀದ್ ಪ್ರದೇಶದಲ್ಲಿರುವ ಬಸ್ ನಿಲ್ದಾಣದಲ್ಲಿ 8 ತಿಂಗಳ ಪುಟ್ಟ ಕಂದಮ್ಮವೊಂದು ತನ್ನ ತಂದೆ-ತಾಯಿ ಜೊತೆ ಮಲಗಿತ್ತು. ಈ ಹಿನ್ನಲೆ ಅಲ್ಲಿಗೆ ಬಂದ ಮಹಿಳೆ ಹಾಗೂ ಪುರುಷ ಮಗುವನ್ನು ಕದ್ದು ಅಲ್ಲಿಂದ ಕಾಲ್ಕಿತ್ತಿರುವುದು ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ. ಈ ಘಟನೆ ಸೋಮವಾರ ನಡೆದಿದ್ದು, ಸಿಸಿಟಿವಿ ದೃಶ್ಯ ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ನಂತರ ರಸ್ತೆ ಬದಿಯಲ್ಲಿ ರಾಣಿ ತನ್ನ ಪತಿ ಹಾಗೂ ಮಗುವಿನೊಂದಿಗೆ ರಸ್ತೆ ಬದಿಯ ಬಸ್ ನಿಲ್ದಾಣದಲ್ಲಿ ಮಲಗಿದ್ದ ಹಿನ್ನಲೆ ಮಗುವನ್ನು ಅಪಹರಿಸಿದ್ದಾರೆ. ರಾಣಿಗೆ ಎಚ್ಚರಗೊಂಡಾಗ ತನ್ನ ಮಗುವನ್ನು ಕದ್ದೊಯ್ಯುತ್ತಿರುವುದನ್ನು ನೋಡನೋಡುತ್ತಿದ್ದಂತೆಯೇ ಆರೋಪಿ ಅಲ್ಲಿಂದ ಎಸ್ಕೇಪ್ ಆಗಿದ್ದಾಳೆ. ಇದರಿಂದ ಗಾಬರಿಗೊಂಡ ಆಕೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಪೊಲೀಸ್ ಅಧಿಕ್ಷಕ ಅಂಕಿತ್ ಮಿತ್ತಲ್ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos