ಕಿಚ್ಚನಿಗೆ ಬ್ಯಾಕ್ ಟು ಬ್ಯಾಕ್ ಬೆನ್ನು ನೋವು

ಕಿಚ್ಚನಿಗೆ ಬ್ಯಾಕ್ ಟು ಬ್ಯಾಕ್ ಬೆನ್ನು ನೋವು

ಬೆಂಗಳೂರು, ಆ.7 : ಪೈಲ್ವಾನ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ವರಮಹಾಲಕ್ಷ್ಮೀ ಹಬ್ಬದಂದು ಆಡಿಯೋ ರಿಲೀಸ್ ಸಮಾರಂಭ ನಡೆಯಲಿದೆ. ಈಗ ಬ್ಯಾಕ್ ಟು ಬ್ಯಾಕ್ ಸಿನಿಮಾ ಶೂಟಿಂಗ್ನಲ್ಲಿ ತೊಡಗಿಕೊಂಡಿರುವ ಕಿಚ್ಚ ಸುದೀಪ್ ಅವರಿಗೆ ಈಗ ಬೆನ್ನು ನೋವು ಕಾಣಿಸಿಕೊಂಡಿದೆ. ಕೋಟಿಗೊಬ್ಬ -3 ಶೂಟಿಂಗ್ ವೇಳೆ ನೋವು ಕಾಣಿಸಿಕೊಂಡಿದ್ದು ವೈದ್ಯರ ಸಲಹೆ ಮೇರೆ ಶೂಟಿಂಗ್ ಸ್ಥಗಿತಗೊಳಿಸಿ ರೆಸ್ಟ್ ತೆಗೆದುಕೊಳ್ಳುತ್ತಿದ್ದಾರೆ.
‘ಅಭಿನಯ ಚಕ್ರವರ್ತಿ’ ಖ್ಯಾತಿಯ ಸ್ಯಾಂಡಲ್ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ ಅವರು ಸಾಕಷ್ಟು ಸಿನಿಮಾಗಲ್ಲಿ ಬ್ಯುಸಿಯಾಗಿರುವುದು ಗೊತ್ತೇ ಇದೆ. ಕಳೆದ ಹಲವು ತಿಂಗಳುಗಳಿಂದ ಸುದೀಪ್ ವಿಶ್ರಾಂತಿಯಿಲ್ಲದೇ ಕೆಲಸ ಮಾಡುತ್ತಿದ್ದಾರೆ. ಕನ್ನಡ ಚಿತ್ರಗಳು ಮಾತ್ರವಲ್ಲದೇ ಬಾಲಿವುಡ್ ಮತ್ತು ತೆಲುಗು ಸಿನಿಮಾರಂಗದಲ್ಲೂ ಸುದೀಪ್ ಸಕ್ರಿಯರಾಗಿದ್ದಾರೆ. ಇತ್ತೀಚೆಗಷ್ಟೇ ಹಿಂದಿಯ ‘ದಬಾಂಗ್ 3’ ಮತ್ತು ತೆಲುಗಿನ ‘ಸೈರಾ ನರಸಿಂಹರೆಡ್ಡಿ’ ಚಿತ್ರೀಕರಣ ಮುಗಿಸಿರುವ ಸುದೀಪ್ ಇದೀಗ ಕನ್ನಡದ ‘ಕೋಟಿಗೊಬ್ಬ 3’ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಆದರೆ, ತೀವ್ರ ಬೆನ್ನುನೋವಿನಿಂದ ನರಳುತ್ತಿರುವ ಸುದೀಪ್ ಅವರಿಗೆ ವೈದ್ಯರು ಫುಲ್ ವಿಶ್ರಾಂತಿ ಸೂಚಿಸಿದ್ದಾರೆ ಎನ್ನಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos