ಕಿಚ್ಚನಿಗೆ ಸುದೀಪ್ ಗೆ ಬೆನ್ನು ನೋವು

ಕಿಚ್ಚನಿಗೆ ಸುದೀಪ್ ಗೆ ಬೆನ್ನು ನೋವು

ಬೆಂಗಳೂರು,ಜು. 31 : ಇದೀಗ ಸುದೀಪ್    ಇಂಜುರಿ ಹಿನ್ನೆಲೆಯಲ್ಲಿ ದಬಾಂಗ್-3 ಚಿತ್ರೀಕರಣ ಸ್ಥಗಿತಗೊಳಿಸಲಾಗಿದೆ. ಸುದೀಪ್ ಸದ್ಯ ಹೈದರಾಬಾದ್ನಲ್ಲಿ ಕೋಟಿಗೊಬ್ಬ-3 ಚಿತ್ರದ ಶೂಟಿಂಗ್ನಲ್ಲಿದ್ದರು. ಸ್ವಾತಿಮುತ್ತು ಶೂಟಿಂಗ್ ಟೈಮ್ನಲ್ಲಿ ಆಗಿದ್ದ ನೋವು ಇದೀಗ ಕೋಟಿಗೊಬ್ಬ ಶೂಟಿಂಗ್ ವೇಳೆ ಮರುಕಳಿಸಿದೆ. ಪೈಲ್ವಾನ್ ನಂತರದ ಮತ್ತೊಂದು ಬಿಗ್ ಚಿತ್ರ ‘ಕೋಟಿಗೊಬ್ಬ 3’ ತಂಡ ಸೇರಿಕೊಂಡಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಲ್ಮಾನ್ಖಾನ್ ಜತೆ ದಬಾಂಗ್-3 ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.
ಕೋಟಿಗೊಬ್ಬ 3 ಶೂಟಿಂಗ್ ಮುಗಿಸಿದ ಸುದೀಪ್ ಮುಂಬೈಗೆ ಚಿತ್ರೀಕರಣಕ್ಕೆ ಹೋಗಬೇಕಿತ್ತು. ಆದರೆ ಆ್ಯಕ್ಷನ್ ಸೀನ್ ಚಿತ್ರೀಕರಣದ ವೇಳೆ ಕಿಚ್ಚ ಸುದೀಪ್ಗೆ ಬೆನ್ನು ನೋವು ಕಾಣಿಸಿಕೊಂಡಿದ್ದರಿಂದಾಗಿ ದಬಾಂಗ್ 3 ಚಿತ್ರೀಕರಣಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ಹೈದರಾಬಾದ್ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದಿರುವ ಸುದೀಪ್ ವಿಶ್ರಾಂತಿ ಪಡೆಯುತ್ತಿದ್ದಾರೆ. ಒಂದು ವಾರ ವಿಶ್ರಾಂತಿ ಪಡೆಯಲಿದ್ದು, ದಬಾಂಗ್ 3 ಚಿತ್ರೀಕರಣಕ್ಕೆ ತೆರಳುತ್ತಿಲ್ಲವಾದ್ದರಿಂದಾಗಿ ಚಿತ್ರೀಕರಣ ಸ್ಥಗಿತಗೊಂಡಿದೆ. (ದಿಗ್ವಿಜಯ ನ್ಯೂಸ್)

ಫ್ರೆಶ್ ನ್ಯೂಸ್

Latest Posts

Featured Videos