ಕೆಐಎ ಆವರಣದಲ್ಲಿ ‘ಕನ್ಸರ್ಟ್ ಆರೇನಾ’

ಕೆಐಎ ಆವರಣದಲ್ಲಿ ‘ಕನ್ಸರ್ಟ್ ಆರೇನಾ’

ಬೆಂಗಳೂರು, ಜು.9 : ದೇಶ-ವಿದೇಶ ರಾಕ್ ಮ್ಯೂಸಿಕ್ ಹಾಗೂ ಇನ್ನಿತರ ಕಾರ್ಯಕ್ರಮಗಳ ಆಯೋಜನೆಗಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಆವರಣದಲ್ಲಿ ವಿಶ್ವದರ್ಜೆಯ ‘ಕನ್ಸರ್ಟ್ ಅರೇನಾ’ ತಲೆ ಎತ್ತಲಿದೆ.

ದೇಶ-ವಿದೇಶಗಳಿಂದ ಆಗಮಿಸುವ ಮತ್ತು ಇಲ್ಲಿಂದ ಪ್ರಯಾಣ ಬೆಳೆಸುವ ಪ್ರಯಾಣಿಕರಿಗಾಗಿ ಊಟ, ಪಾನೀಯ, ಲಘು ಸಂಗೀತ, ನಾಟಕ ಸೇರಿದಂತೆ ಇನ್ನಿತರ ಕಾರ್ಯಕ್ರಮ ನಡೆಸಲು, ವೀಕ್ಷಿಸಲು ಮತ್ತು ಆವರಣದಲ್ಲಿ ಕಾಲ ಕಳೆಯಲು ಈಗಾಗಲೇ ಆಕರ್ಷಕ ‘ದಿ ಕ್ವಾಡ್’ ಎಂಬ ಹ್ಯಾಂಗ್ಔಟ್ ತಾಣವಿದೆ. ವಿದೇಶಗಳ ವಿಮಾನ ನಿಲ್ದಾಣಗಳ ರೀತಿಯಲ್ಲಿ ಆರಂಭಿಸಲಾಗಿರುವ ಈ ತಾಣಕ್ಕೆ ಪ್ರಯಾಣಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಹೀಗಾಗಿ, ಭವಿಷ್ಯದಲ್ಲಿ ಸಂಗೀತ ಮತ್ತು ಇನ್ನಿತರ ಕಾರ್ಯಕ್ರಮಗಳ ಆಯೋಜನೆಗಾಗಿ ಕನ್ಸರ್ಟ್ ಅರೇನಾ ನಿರ್ಮಾಣವಾಗಲಿದೆ.

ಫ್ರೆಶ್ ನ್ಯೂಸ್

Latest Posts

Featured Videos