ಬಣ್ಣದ ಕಾರ್ಖಾನೆಯಲ್ಲಿ ಭಾರಿ ಅಗ್ನಿ ಅವಘಡ

ಬಣ್ಣದ ಕಾರ್ಖಾನೆಯಲ್ಲಿ ಭಾರಿ ಅಗ್ನಿ ಅವಘಡ

ಬೆಂಗಳೂರು(ನೆಲಮಂಗಲ): ಬಣ್ಣ ತಯಾರಿಸುವ ಕಾರ್ಖಾನೆಗೆ ಸೇರಿದ ಗೋದಾಮಿನಲ್ಲಿ ಇಂದು ಮಧ್ಯಾಹ್ನ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ದಟ್ಟ ಹೊಗೆ ಮುಗಿಲೆತ್ತರಕ್ಕೆ ಆವರಿಸಿದ್ದರಿಂದ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಮಾದನಾಯಕನಹಳ್ಳಿ ವ್ಯಾಪ್ತಿಯ ಕುದುರೆಗೆರೆ ಕಾಲೋನಿ ಸಮೀಪದ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ ಹಿಂಭಾಗದಲ್ಲಿ ಬಣ್ಣ ತಯಾರು ಮಾಡುವ ಕಾರ್ಖಾನೆಗೆ ಸೇರಿದ ಗೋದಾಮು ಇದ್ದು , ಅಲ್ಲಿ ಬಣ್ಣ ತಯಾರಿಕೆಗೆ ಬಳಸುವ ತೈಲವನ್ನು ಸಾವಿರಾರು ಪ್ಲಾಸ್ಟಿಕ್ ಡ್ರಮ್‍ಗಳಲ್ಲಿ ಸಂಗ್ರಹಿಸಿಡಲಾಗಿತ್ತು.

ಇಂದು ಮಧ್ಯಾಹ್ನ ಸುಮಾರು 12.30ರ ಸಮಯದಲ್ಲಿ ಈ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡು ಭಾರೀ ದಟ್ಟ ಹೊಗೆ ಆವರಿಸಿದೆ. ಸುದ್ದಿ ತಿಳಿದು ಬೆಂಗಳೂರು, ತುಮಕೂರು, ನೆಲಮಂಗಲದಿಂದ ಸುಮಾರು 16 ವಾಹನಗಳಲ್ಲಿ 70ಕ್ಕೂ ಹೆಚ್ಚು ಅಗ್ನಿಶಾಮಕ ದಳದ ಅಧಿಕಾರಿಗಳು, ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ತೊಡಗಿದ್ದರು.

ಈ ಸಂದರ್ಭದಲ್ಲಿ ಆ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು. ಬೆಂಕಿಯಿಂದಾಗಿ ಉಂಟಾದ ದಟ್ಟ ಹೊಗೆ ಸುಮಾರು 10 ಕಿ.ಮೀವರೆಗೂ ಆವರಿಸಿರುವುದು ಕಂಡುಬಂದಿತು.

ಮಾದನಾಯಕನಹಳ್ಳಿ ಠಾಣೆ ಪೊಲೀಸರು ಅಗ್ನಿಶಾಮಕ ಸಿಬ್ಬಂದಿ ಜೊತೆ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos