ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾಗಳಿಗೆ ಶಾಸಕರ ಖಡಕ್ ವಾರ್ನಿಂಗ್

ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾಗಳಿಗೆ ಶಾಸಕರ ಖಡಕ್ ವಾರ್ನಿಂಗ್

 ಬೊಮ್ಮನಹಳ್ಳಿ, ಡಿ. 04: ಬೊಮ್ಮನಹಳ್ಳಿ ವಿಧಾನಸಭಾ ವ್ಯಾಪ್ತಿಗೆ ಸೇರಿದ  ಹಳೆ ಮಂಗಮ್ಮನ ಪಾಳ್ಯ ವಾರ್ಡ್ನ ಅಂಬೇಡ್ಕರ್ ಕಾಲೋನಿ ಹಾಗು ಹೊಸಪಾಳ್ಯ ವಿವಿದ ವಾರ್ಡ್ಗಳಿಗೆ ಭೇಟಿ ನೀಡಿದ ಸ್ಥಳಿಯ ಶಾಸಕರಾದ ಎಂ.ಸತೀಶ್ ರೆಡ್ಡಿ ಪರಿಶೀಲನೆ ಮಾಡಿದ ವೇಳೆ ಸ್ಥಳೀಯ ನಿವಾಸಿಗಳ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ಮೇಲೆ ಗರಂ ಆಗಿ ಖಡಕ್ ಎಚ್ಚರಿಕೆ ನೀಡಿದರು.

ಇಂದು  ಬೆಳಗ್ಗೆ ದಿಡೀರ್ ಕ್ಷೇತ್ರ ಪ್ರವಾಸ ಕೈಗೊಳ್ಳುವ ಮೂಲಕ ಅಧಿಕರಿಗಳನ್ನು ಸ್ಥಳಕ್ಕೆ ಕರೆಸಿಕೊಂಡ ಶಾಸಕರು ಯಾವುದೇ ಜನರ ಸಮಸ್ಯೆಗಳನ್ನು ಸ್ವತಹ ಕಣ್ಣಾರೆ ಕಂಡು ಸಾರ್ವಜನಿಕರ ಎದುರಲ್ಲೇ ತರಾಟೆಗೆ ತೆಗೆದುಕೊಂಡು ಚಳಿ ಬಿಡಿಸಿದರು.  ಆಂಬೇಡ್ಕರ್ ಕಾಲೋನಿ ಸೇರಿದಂತೆ ಇತರ ಬಡಾವಣೆಗಳ ಸರ್ವತೋಮುಖ ಅಭಿವೃದ್ದಿ ಮತ್ತು ಮೂಲ ಸೌಕರ್ಯ ಅಭಿವೃದಿ  ಬಿಬಿಎಂಪಿಯಲ್ಲಿ 12 ಕೋಟಿ ಹಣ ಮೀಸಲಿಟ್ಟಿದ್ದರೂ ಅನುಷ್ಟಾನಗೊಳಿಸದ ಅಧಿಕಾರಿಗಳ ವಿರುದ್ದ ಶಾಸಕ ಎಂ.ಸತೀಶ್ ರೆಡ್ಡಿ ಕೂಡಲೇ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲೇ ಸೂಚಿಸಿದರು.

ಇತ್ತೀಚೆಗೆ ಮಳೆ ಬಂದ ಸಂದರ್ಭದಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಠಿಯಾಗಿತ್ತಾದರೂ ಜನರ ಸಮಸ್ಯಗಳ ನಿವಾರಣೆ ಮಾಡುವಲ್ಲಿ ಅಧಿಕಾರಿಗಳು ವಿಫಲಾರಾಗಿದ್ದನ್ನು ಶಾಸಕರು ಖಂಡಿಸಿದರು.

ವಿದ್ಯತ್ ಕಂಬಗಳನ್ನು ಸ್ಥಳಾಂತರಿಸುವಂತೆ ಹಲವು ಸಾರಿ ಅಧಿಕಾರಿಗಳಿಗೆ ಮನವಿ ನೀಡಿದ್ದರೂ ಸ್ಪಂದಿಸಿಲ್ಲವೆಂದು ಜನರು ಅಧಿಕಾರಿಗಳ ಮುಂದೆ ಶಾಸಕರಿಗೆ ದೂರುಗಳ ಸುರಿಮಳೆಗೆರೆದರು. ಇದರಿಂದ ಸಿಟ್ಟಾದ ಶಾಸಕರು ಬೆಸ್ಕಾಂ ಎಕ್ಸಿಕ್ಯೂಟಿವ್ ಎಂಜಿನಿಯರ್ ಶ್ರೀನಿವಾಸ್‌ರನ್ನು ತರಾಟೆಗೆ ತೆಗೆದುಕೊಂಡು ಕೂಡಲೇ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಿ ಜನರಿಗೆ ಆಗುತ್ತಿರುವ ತೊಂದರೆ ನಿವಾರಿಸುವಂತೆ ಸೂಚಿಸಿದರು.

ಪಾಲಿಕೆಯ ಮೂಲಸೌಕರ್ಯಗಳದ ಚರಂಡಿ ರಸ್ತೆ ಸ್ವಚ್ಚತೆ, ಕುಡಿಯುವ ನೀರು, ಬೀದಿ ದೀಪ ಹಾಗು ಸಮರ್ಪಕವಾಗಿ ನಿರ್ಮಾಣ ಮಾಡದ ಮ್ಯಾನ್ ಹೋಲ್‌ಗಳನ್ನು ಪರಿಶೀಲಿಸಿದ ಶಾಸಕ ಸತೀಶ್ ರೆಡಿ ಅವರು ಜಲಮಂಡಳಿ ಎಂಜಿನಿಯರ್ ನಾಗೇಂದ್ರ ಮತ್ತು ಸಿವಿಲ್ ಕಾಮಗಾರಿ ನಿರ್ವಹಣೆಯ ಎಕ್ಸಿಕ್ಯೂಟಿವ್ ಎಂಜಿನಿಯರ್ ಅವರನ್ನು ಸ್ಥಳೀಯ ನಿವಾಸಿಗಳೆದೂರೇ ತರಾಟೆಗೆ ತೆಗೆದುಕೊಂಡು ಕೂಡಲೇ ಇಲ್ಲಿನ ಬಡಾವಣೆಗಳಲ್ಲಿ ಆಗಬೇಕಾದ ಮೂಲ ಸೌಕರ್ಯ ಹಾಗೂ ಅಭಿವೃದ್ದಿ ಕಾಮಗಾರಿ ಸೇರಿದಂತೆ ರಸ್ತೆ ದುರಸ್ತಿ ಕೆಲಸವನ್ನು ಎರಡು ತಿಂಗಳೊಳಗೆ ಮುಗಿಸುವಂತೆ ಗಡುವು ನೀಡಿದರು.

ಹಳೆ ಮಂಗಮ್ಮನ ಪಾಳ್ಯ ವ್ಯಾಪ್ತಿಯಲ್ಲಿನ ಬಡಾವಣೆಗಳ ಅಭಿವೃದ್ದಿಗೆ ಪಾಲಿಕೆಯಲ್ಲಿ 12 ಕೋಟಿ ಹಣ ಮೀಸಲಿಟ್ಟಿದ್ದರೂ ಕಾಮಗಾರಿ ಆರಂಭಿಸದಿರುವುದಕ್ಕೆ ಅಸಮದಾನ ವ್ಯಕ್ತಪಡಿಸಿದ ಶಾಸಕ ಸತೀಶ್ ರೆಡ್ಡಿ ಅವರು ಯಾವದೇ ಅಧಿಕಾರಿ ಜನರ ಸಮಸ್ಯಗಳಿಗೆ ಸ್ಪಂದಿಸಿ ಕೆಲಸ ಮಾಡಿ ಇಲ್ಲವೇ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆಂದು ಖಡಕ್ ಎಚ್ಚರಿಕೆ ನೀಡಿದ್ದಲ್ಲದೆ ಸಾರ್ವಜನಿಕರಿಗೆ ಸ್ಪಂದಿಸದಿದ್ದರೆ ಇಲ್ಲಿಂದ ಜಾಗ ಖಾಲಿ ಮಾಡಿ ಬೇರೆಡೆಗೆ ಹೋಗಿ ಸೋಮಾರಿತನ ಸಹಿಸಲಾರೆ ಎಂದು ತಾಕೀತು ಮಾಡಿದರು.

 

 

 

ಫ್ರೆಶ್ ನ್ಯೂಸ್

Latest Posts

Featured Videos