100 ದಿನ ಪೂರೈಸಿದ ಕೆಜಿಎಫ್ ಚಿತ್ರ

100 ದಿನ ಪೂರೈಸಿದ ಕೆಜಿಎಫ್ ಚಿತ್ರ

ಬೆಂಗಳೂರು, ಮಾ. 30, ನ್ಯೂಸ್ ಎಕ್ಸ್ ಪ್ರೆಸ್: ಕೆಜಿಎಫ್  ಚಿತ್ರವು ಕನ್ನಡ ಚಿತ್ರರಮಗದಲ್ಲಿ ಹೊಸ ದಾಖಲೆ ಮುಡಿಸಿದೆ. ಕನ್ನಡ ಚಿತ್ರರಂಗದ ಕ್ವಾಲಿಟಿ ಏನು ಎಂಬುದನ್ನು ಮತ್ತೊಮ್ಮೆ ನಿರೂಪಿಸಿತ್ತು. ಇದೀಗ ಕೆಜಿಎಫ್  ಚಿತ್ರವು 100 ದಿನ ಪೂರೈಸುವ ಮೂಲಕ ನಗೆ ಬೀರಿದೆ.

ಪ್ರಸ್ತುತ ಪರಿಸ್ಥಿತಿಯಲ್ಲಿ ಶತದಿನೋತ್ಸವ ಎಂಬುದೇ ದೂರದ ಮಾತು. 100 ದಿನ ಇರಲಿ, 50 ದಿನ ಪೂರೈಸುವುದೇ ದೊಡ್ಡ ಸಾಧನೆ. ಅಂಥದ್ದರಲ್ಲಿ ಗಲ್ಲಾ ಪೆಟ್ಟಿಗೆ ಬ್ರೇಕ್ ಮಾಡೋದರ ಜೊತೆಗೆ ಕೆಜಿಎಫ್ 100ರ ಸಂಭ್ರಮ ಕಂಡಿದೆ.

ಬರೋಬ್ಬರಿ 950 ಸ್ಕ್ರೀನ್ಗಳಲ್ಲಿ ಕೆಜಿಎಫ್ ಪ್ರದರ್ಶನ ಕಂಡಿತ್ತು. ಎಲ್ಲೆಡೆ ಭರಪೂರ ಸ್ವಾಗತ ಪಡೆದಿದೆ. ಇಂದಿಗೂ ಹಲವೆಡೆ ಪ್ರದರ್ಶನ ಮುಂದುವರೆದಿದೆ. ಈ ಮೂಲಕ ಕೆಜಿಎಫ್ ಚಿತ್ರತಂಡ ಎವರ್ಗ್ರೀನ್ ದಾಖಲೆ ಬರೆದಿದೆ. ಚಿತ್ರದ ಶತದಿನೋತ್ಸವ ಆಚರಿಸುತ್ತಿರೋ ಬೆನ್ನಲ್ಲೇ ‘ಕೆಜಿಎಫ್ -2’ ಕೆಲಸವೂ ಭರದಿಂದ ಸಾಗುತ್ತಿದೆ. ಮುಂದಿನ ತಿಂಗಳು ಚಿತ್ರೀಕರಣ ಆರಂಭವಾಗಲಿದೆ.

ಫ್ರೆಶ್ ನ್ಯೂಸ್

Latest Posts

Featured Videos