ಬರೀ 5 ವೋಟು ಎಂದು ಅಳ್ತಿದ್ದ ಅಭ್ಯರ್ಥಿಗೆ ಸಿಕ್ಕಿದ್ದು 856 ಮತಗಳು!

ಬರೀ 5 ವೋಟು ಎಂದು ಅಳ್ತಿದ್ದ ಅಭ್ಯರ್ಥಿಗೆ ಸಿಕ್ಕಿದ್ದು  856 ಮತಗಳು!

ನವದೆಹಲಿ, ಮೇ. 24, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭಾ ಚುನಾವಣೆಲ್ಲಿ ನನಗೆ ಕೇವಲ 5 ಮತಗಳು ಸಿಕ್ಕಿದೆ ಎಂದು ಅಳುತ್ತಿದ್ದ ಅಭ್ಯರ್ಥಿಗೆ ಈಗ 856  ಮತಗಳು ಸಿಕ್ಕಿದೆ. ಹೌದು, ಪಂಜಾಬ್ ನ ಪಕ್ಷೇತರ ಅಭ್ಯರ್ಥಿಯೊಬ್ಬರು ಕೇವಲ 5 ಮತಗಳನ್ನು ಪಡೆದು, ಮನೆಯವರೇ ನನಗೆ ಮತ ಹಾಕಲಿಲ್ಲ ಎಂದು ಕಣ್ಣೀರು ಸುರಿಸಿದ್ದಾರೆ.

ಜಲಂಧರ್ ಕ್ಷೇತ್ರದ ಅಭ್ಯರ್ಥಿ ಕೇವಲ 5 ಮತಗಳನ್ನು ಪಡೆದ ಬಳಿಕ, ಮನೆಯ ಸದಸ್ಯರ ಸಂಖ್ಯೆ 9 ಇದ್ದರೂ ತನಗೆ ಸಿಕ್ಕಿದ್ದು 5 ಮತಗಳು ಎಂದು ಬೇಸರಿಸಿದ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್ ಗಳು ಆಗಿದ್ದವು. ಆದರೆ ವಾಸ್ತವ ಸಂಗತಿಯೇ ಬೇರೆ ಇದೆ. ಅಸಲಿಗೆ ಆತ ಪಡೆದ ಮತಗಳು 5 ಮಾತ್ರವಲ್ಲ, 856 ಮತಗಳು. ಅಭ್ಯರ್ಥಿ ಹೆಸರು ನೀತು ಶಟ್ಟೇರನ್ ವಾಲಾ. ಚುನಾವಣೆ ಆಯೋಗದ ವೆಬ್ ಸೈಟ್ ನಲ್ಲಿ ಪರಿಶೀಲಿಸಿದಾಗ ನೀತು ಶಟ್ಟೇರನ್ ಪಡೆದ ಮತಗಳು 856 ಎಂಬುದು ಖಾತರಿ ಆಗಿದೆ.

ನೀತು ವಾಲಾ ಕ್ಯಾಮರಾಗಳ ಮುಂದೆ ತನಗೆ ಐದೇ ಮತಗಳು ಬಂದಿವೆ ಎಂದು ಊಹಿಸಿಕೊಂಡು ಅಸಮಾಧಾನ ವ್ಯಕ್ತ ಪಡಿಸಿದ್ದರು. ತನ್ನ ಕುಟುಂಬ ಸದಸ್ಯರ ಸಂಖ್ಯೆಯೇ 9 ಇರುವಾಗ ತನಗೆ ಕೇವಲ 5 ಮತಗಳು ಬಂದಿದ್ದು ಹೇಗೆ? ಎಂದು ಪ್ರಶ್ನಿಸಿಕೊಳ್ಳುತ್ತ ಅಳಲನ್ನು ಪಡಿಸಿದ್ದರು.. ಅದನ್ನೇ ಬಂಡವಾಳವನ್ನಾಗಿಸಿಕೊಂಡ ಟ್ರೋಲಿಗರು ವಾಸ್ತವನ್ನು ಅರಿಯುವ ಗೋಜಿಗೆ ಹೋಗದೆ ಹೇಗೆ ಬೇಕೋ ಹಾಗೆ ಸಾಮಾಜಿಕ ತಾಣಗಳಲ್ಲಿ ಕಾಲೆಳೆದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos