ಸಿದ್ಧಗಂಗಾ ಮಠದಲ್ಲಿ ಕೇಶಮುಂಡನ ವಿವಾದ!

ಸಿದ್ಧಗಂಗಾ ಮಠದಲ್ಲಿ ಕೇಶಮುಂಡನ ವಿವಾದ!

ತುಮಕೂರು: ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ 8 ದಿನದಲ್ಲಿ, ಮಠದ ವಿದ್ಯಾರ್ಥಿಗಳ ವಿಚಾರದಲ್ಲಿ ಸಿದ್ದಗಂಗಾ ಮಠದ ಹಾಲೀ ಶ್ರೀಗಳಾದ ಸಿದ್ದಲಿಂಗ ಸ್ವಾಮೀಜಿ ಮತ್ತು ಬಸವಧರ್ಮ ಪೀಠದ ಮಾತೆ ಮಹಾದೇವಿ ನಡುವೆ ವಿವಾದ ಎದ್ದಿದೆ.

ಸಿದ್ದಗಂಗಾ ಶ್ರೀಗಳು ಲಿಂಗೈಕ್ಯರಾದ ಹಿನ್ನಲೆಯಲ್ಲಿ ಅವರ ಹನ್ನೊಂದನೇ ದಿನದ ಕಾರ್ಯಕ್ರಮಕ್ಕೂ ಮುನ್ನ, ಮಠದಲ್ಲಿ ಓದುತ್ತಿರುವ ಎಂಟು ಸಾವಿರ ವಿದ್ಯಾರ್ಥಿಗಳಿಗೆ ಕೇಶಮುಂಡನ ಮಾಡಿಸುವ ಸುದ್ದಿಯ ವಿಚಾರದಲ್ಲಿ, ಮಠದ ನಿಲುವನ್ನು ಪ್ರಶ್ನಿಸಿ ಮಾತೆ ಮಹಾದೇವಿ ಟೀಕಾ ಪ್ರಹಾರ ಮಾಡಿದ್ದಾರೆ.

ಮಾತೆ ಮಹಾದೇವಿಯ ಟೀಕೆಗೆ ನಯವಾಗಿ ತಿರುಗೇಟು ನೀಡಿರುವ ಸಿದ್ದಲಿಂಗ ಶ್ರೀಗಳು, ಮಾತೆ ಮಹಾದೇವಿ ದೊಡ್ಡವರು, ತಿಳಿದವರು, ಕ್ಷೌರ ಮತ್ತು ಕೇಶಮುಂಡನದ ನಡುವಿನ ವ್ಯತ್ಯಾಸವನ್ನು ತಿಳಿದವರು ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದ್ದಾರೆ.

ಆದರೆ, ಸಿದ್ದಗಂಗಾ ಮಠ ಹೊರಡಿಸಿರುವ ಪತ್ರಿಕಾ ಹೇಳಿಕೆಯಲ್ಲಿ ಕೇಶಮುಂಡನ ಎಂದೇ ನಮೂದಿಸಲಾಗಿತ್ತು. ಸಿದ್ದಗಂಗಾ ಮಠ ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾದ ಗುರುಪೀಠವಲ್ಲ ಎನ್ನುವುದು ನಾಡಿಗೆ ಗೊತ್ತಿರುವ ವಿಚಾರ. ದೊಡ್ಡವರು ದೊಡ್ಡ ಮಾತನ್ನಾಡುತ್ತಾರೆ. ಅವರು, ಹಾಗೇ ಮಾತನಾಡುತ್ತಲೇ ಇರಲಿ ಎಂದು ಸಿದ್ದಲಿಂಗ ಶ್ರೀಗಳು ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos