ಕೆರೆಯಲ್ಲಿದ್ದ ಮರಗಳ ಮಾರಣ ಹೋಮ

ಕೆರೆಯಲ್ಲಿದ್ದ ಮರಗಳ ಮಾರಣ ಹೋಮ

ಬೆಂಗಳೂರು, ಆನೇಕಲ್: ಸರ್ಕಾರ, ಪರಿಸರ ಪ್ರೇಮಿಗಳು ಮರಗಳನ್ನು ಸರ್ಕಾರಿ ಜಮೀನುಗಳು ಸೇರಿದಂತೆ ಖಾಸಗಿ ಜಮೀನುಗಳಲ್ಲಿ ನೆಟ್ಟು ಪರಿಸರ ಉಳಿಸಲು ನಾನಾ ಕಸರತ್ತು ಮಾಡುತ್ತಿದ್ದರೆ ಇತ್ತ ಇಟ್ಟಿಗೆ ಕಾರ್ಖಾನೆಗಳ ಮಣ್ಣು ದಾಹಕ್ಕೆ ಕರೆಯಲ್ಲಿ ಬೆಳೆದಿದ್ದ ನೂರಾರು ಮರಗಳ ರಾತ್ರೋ ರಾತ್ರಿ ಕಣ್ಣ್ಮರೆಯಾಗಿ ಹೋಗಿದ್ದು ಇದಕ್ಕೆಲ್ಲ ಕಾರಣ ಸರ್ಕಾರಿ ಅಧಿಕಾರಿಗಳಾಗಿರುವುದು ಬೆಳಕಿಗೆ ಬಂದಿದೆ.

ಹೀಗೆ ಕೆರೆಯಲ್ಲಿ ಮಣ್ಣು ತೆಗೆದಿರುವ ಇಟ್ಟಿಗೆ ಖಾರ್ಕಾನೆಯವರು, ಮಣ್ಣು ತೆಗೆದಿರುವ ಸುತ್ತ ಕೆರೆಯಲ್ಲಿ ಬೆಳೆದು ನಿಂತಿರುವ ವಿವಿಧ ಜಾತಿಗೆ ಸೇರಿರುವ ಮರಗಳು, ಗಿಡಗಳು ಕಾಣೆಯಾಗಿರುವುದಕ್ಕೆ ಆಕ್ರೋಶ ವ್ಯಕ್ತ ಪಡೆಸುತ್ತಿರುವ ಅಧಿಕಾರಿಗಳು ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು ಬೆಂಗಳೂರು ಹೊರವಲಯದ ಆನೇಕಲ್ ನ ಬ್ಯಾಗಡದೇನಹಳ್ಳಿ ಗ್ರಾಮಕ್ಕೆ ಸೇರಿರುವ ಕೆರೆಯಲ್ಲಿ. ಕೆಲ ಸ್ಥಳೀಯ ರಾಜಕಾರಣಿಗಳ ಸಹಾಯದಿಂದ ಆನೇಕಲ್ ತಾಲ್ಲೂಕಿನ ಆನೇಕ ಕೆರೆಗಳು ಇಟ್ಟಿಗೆ ಕಾರ್ಖಾನೆ ಮಾಲಿಕರ ಮಣ್ಣು ದಾಹಕ್ಕೆ ತನ್ನ ಮೂಲ ಸ್ಥಿತಿಯನ್ನೆ ಕಳೆದು ಕೊಂಡಿರುವಾಗ ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಲಕ್ಷ್ಯಕ್ಕೆ ಇಂದು ಕೆರೆಯಲ್ಲಿ ಬೆಳೆದಿದ್ದ ನೂರಾರು ಮರಗಳು ಕಣ್ಣಿಗೆ ಕಾಣದೆ ಮಾಯವಾಗಿ ಹೋಗಿದ್ದು, ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಇಂದು ಸ್ಥಳೀಯ ಗ್ರಾಮದ ನಿವಾಸಿಗಳು ತಿರುಗಿಬಿದ್ದು ತೀವ್ರ ತರಾಟೆಗೆ ತೆಗೆದು ಕೊಂಡಿದ್ದಾರೆ.

ಇನ್ನು ಈ ಮರಗಳನ್ನು ಕಳೆದ 5 ವರ್ಷಗ ಹಿಂದೆ ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಬ್ಯಾಗಡದೇನಹಳ್ಳಿ ಕೆರೆಯಲ್ಲಿ ಸುಮಾರು 3 ಸಾವಿರಕ್ಕು ಹೆಚ್ಚು ವಿವಿಧ ಜಾತಿಗೆ ಸೇರಿದ್ದ ಸಸಿಗಳನ್ನು ಲಂಕ್ಷಾಂತರ ರೂ ಹಣ ಖರ್ಚು ಮಾಡಿ ಬೆಳೆಸಲಾಗಿತ್ತು.

ಕೆಲ ಅಧಿಕಾರಿಗಳು ಸೇರಿದಂತೆ ಸ್ಥಳೀಯ ರಾಜಕರಣಿಗಳ ಕುಮ್ಮಕ್ಕಿನಿಂದ ಇಟ್ಟಿಗೆ ಕಾರ್ಖಾನೆಗಳ  ಮಾಲಿಕರು ಕೆರೆಯಲ್ಲಿ ಸುಮಾರು 500ಕೂ ಹೆಚ್ಚು ಮರಗಳಿರುವ ಸ್ಥಳದಲ್ಲೆ ಮಣ್ಣು ತೆಗೆದು ಮಣ್ಣನ್ನು ಕದ್ದು ಇತ್ತ ಮರಗಳನ್ನು ನಾಶ ಮಾಡಿರುವುದು ಬೆಳಕಿಗೆ ಬಂದಿದೆ. ಇನ್ನು ಈ ಬಗ್ಗೆ ಮಾಹಿತಿ ಪಡೆದ ಕಂದಾಯ, ಗ್ರಾಮ ಪಂಚಾಯಿತಿ, ಹಾಗು ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಪರೀಶಿಲನೆ ಮಾಡಿ ಇಲ್ಲಿ ಮರ ಕಡೆದು ಮಣ್ಣು ತೆಗೆದಿರುವುದು ಸಾಬೀತಾಗಿದೆ.

ಅಧಿಕಾರಿಗಳು ವಿಚಾರಿಸಿದರೆ ಕೆರೆಯ ಅಭಿವೃದ್ಧಿಗೆ ಆನೇಕಲ್ ಯೋಜನ ಪ್ರಾಧಿಕಾರದಿಂದ 2 ಕೋಟಿ ಹಣ ಬಿಡುಗಡೆಯಾಗಿದೆ ನಾವು ಕೆಲಸ ಮಾಡುತ್ತಿದ್ದೆವೆಂದು ಉತ್ತರ ನೀಡಿದ್ದಾರೆ.

ಇನ್ನು ಒಂದೆಡೆ ಮರ ಬೆಳೆಸಲು ಹಣ ಖರ್ಚು ಮಾಡಿ ಗ್ರಾಮ ಪಂಚಾಯಿತಿ ಮರಗಳನ್ನು ಕೆರೆಯಲ್ಲಿ ಬೆಳಸಿದರೆ ಇನ್ನೊಂದೆಡೆ ಅದೇ ಮರಗಳನ್ನು ಖರ್ಚು ಮಾಡಿ ಅಭಿವೃಧ್ಧಿ ಹೆಸರಲ್ಲಿ ಮರಗಳನ್ನು ಕಡೆದು ಮಣ್ಣು ಕೊಳ್ಳೆ ಒಡೆಯಲು ಅಧಿಕಾರಿಗಳೆ ಅನುಮತಿಯನ್ನು ನೀಡಿರುವುದು ಈ ಪ್ರಕರಣದಲ್ಲಿ ಸಾಭಿತಾಗಿದೆ. ಈ ಬಗ್ಗೆ ಕೂಡಲೆ ತಹಸೀಲ್ದಾರ್ ನೇತ್ರತ್ವದಲ್ಲಿ ತನಿಖೆ ನಡೆಸಿ ಮರ ಕಡೆದು ಮಣ್ಣು ಕೊಳ್ಳೆ ಒಡೆದವರ ವಿರುದ್ದ ಕಠಿಣ ಕ್ರಮ ಜರುಗಿಸ ಬೇಕಿದೆ.

ಫ್ರೆಶ್ ನ್ಯೂಸ್

Latest Posts

Featured Videos