ಬಾಲ್ ತರಲೆಂದು : ಕೆರೆಯಲ್ಲಿ ಮುಳಗಿದ ಬಾಲಕ

ಬಾಲ್ ತರಲೆಂದು : ಕೆರೆಯಲ್ಲಿ ಮುಳಗಿದ ಬಾಲಕ

ಬೆಂಗಳೂರು , ಸೆ. 26 : ಕೆರೆ ಬಳಿ ಕ್ರಿಕೆಟ್ ಆಟವಾಡುತ್ತಿರುವ ಹಿನ್ನಲೆ ಆಕಸ್ಮಾತ ಬಾಲ್ ಕೆರೆಯಲ್ಲಿ ಬಿದ್ದಿದೆ. ಕ್ರಿಕೆಟ್ ಬಾಲ್ ತರಲೆಂದು ಕೆರೆಗೆ ಇಳಿದ ಬಾಲಕ ಮೃತಪಟ್ಟ ಘಟನೆ ಬೆಂಗಳೂರಿನ ಸರ್ಜಾಪುರದ ಅಂಬೇಡ್ಕರ್ ನಗರದಲ್ಲಿ ನಡೆದಿದೆ.
ಪ್ರಿಯಾಂಶು (13) ಮೃತ ದುರ್ದೈವಿ ಬಾಲಕ. ಶಾಲೆ ಮುಗಿಸಿ ಮನೆಗೆ ಬಂದ ಬಾಲಕ, ತನ್ನ ಗೆಳೆಯರೊಂದಿಗೆ ಕ್ರಿಕೆಟ್ ಆಡಲು ಹೋಗಿದ್ದಾನೆ. ಈ ವೇಳೆ ಬಾಲ್ ಕೆರೆಯಲ್ಲಿ ಬಿದ್ದಿದೆ. ಇದನ್ನು ತರಲೆಂದು ಬಾಲಕ ಕೆರೆಗೆ ಇಳಿದಿದ್ದಾನೆ. ಪರಿಣಾಮ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಸಂಜೆ ಕೆರೆಯಲ್ಲಿ ಮುಳುಗಿದ ಬಾಲಕನಿಗಾಗಿ ಎನ್.ಡಿ.ಆರ್.ಎಫ್ ತಂಡ ರಕ್ಷಣಾ ಕಾರ್ಯ ನಡೆಸಿ ರಾತ್ರಿ ವೇಳೆಗೆ ಬಾಲಕನ ಶವವನ್ನು ಹೊರತೆಗೆದಿದ್ದಾರೆ. ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವರ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos