‘ಕೆರೆಬೇಟೆ’ ಟ್ರೈಲರ್ ರಿಲೀಸ್..!

‘ಕೆರೆಬೇಟೆ’ ಟ್ರೈಲರ್ ರಿಲೀಸ್..!

ಬೆಂಗಳೂರು: ಅಪ್ಪಟ ಮಲೆನಾಡಿನ ಪರಿಸರದಲ್ಲಿ ನಡೆಯುವ ಕಹಾನಿ ‘ಕರೆಬೇಟೆ’ ಸಿನಿಮಾದಲ್ಲಿದೆ. ರಫ್​ ಆ್ಯಂಡ್​ ಟಫ್​ ಆದಂತಹ ಪಾತ್ರಕ್ಕೆ ನಾಯಕ ಗೌರಿಶಂಕರ್​ ಅವರು ಬಣ್ಣ ಹಚ್ಚಿದ್ದಾರೆ. ಅವರಿ​ಗೆ ಜೋಡಿಯಾಗಿ ಬಿಂಧು ಶಿವರಾಮ್ ನಟಿಸಿದ್ದಾರೆ. ಸಿನಿಮಾದ ಮೇಲಿನ ನಿರೀಕ್ಷೆಯನ್ನು ಡಬಲ್​ ಮಾಡುವ ರೀತಿಯಲ್ಲಿ ಟ್ರೇಲರ್​ ಮೂಡಿಬಂದಿದೆ.

‘ಕೆರೆಬೇಟೆ’ ಫಸ್ಟ್ ಲುಕ್ ಮತ್ತು ಟೀಸರ್ ಮೂಲಕವೇ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಕುತೂಹಲ ಮೂಡಿಸಿರುವ ಸಿನಿಮಾ. ಇದೀಗ ಸಿನಿಮಾತಂಡ ಟ್ರೈಲರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದೆ. ಭಾರಿ ನಿರೀಕ್ಷೆಯ ಟ್ರೈಲರ್ ರಿಲೀಸ್ ಆಗಿದೆ. ‘ಕೆರೆಬೇಟೆ’ ಮಲೆನಾಡು ಭಾಗದ ಮೀನು ಬೇಟೆಯಾಗುವ ಒಂದು ಪದ್ಧತಿ. ಮಲೆನಾಡಿನ ಈ ವಿಭಿನ್ನ ಸಂಸ್ಕೃತಿಯನ್ನು ಮೊದಲ ಬಾರಿಗೆ ತೆರೆಮೇಲೆ ತರುತ್ತಿದ್ದಾರೆ ನಿರ್ದೇಶಕ ರಾಜ್‌ಗುರು. ನಾಯಕನಾಗಿ ಗೌರಿಶಂಕರ್ ಎಸ್‌ಆರ್‌ಜಿ  ಕಾಣಿಸಿಕೊಂಡಿದ್ದಾರೆ. ವಿಭಿನ್ನವಾದ ಒಂದೊಳ್ಳೆ ಹಳ್ಳಿ ಸೊಗಡಿನ ಸಿನಿಮಾ ಮೂಲಕ ಗೌರಿಶಂಕರ್ ತೆರೆಮೇಲೆ ಮಿಂಚಲು ಸಜ್ಜಾಗಿದ್ದಾರೆ.

ಸದ್ಯ ರಿಲೀಸ್ ಆಗಿರುವ ಟ್ರೈಲರ್ ಗಮನ ಸೆಳೆಯುತ್ತಿದೆ. ಅಂಟಿಗೆ ಪಿಂಟಿಗೆ ಶೈಲಿಯಲ್ಲೇ ಟ್ರೈಲರ್ ರಿಲೀಸ್ ಮಾಡಿದ್ದು ವಿಶೇಷವಾಗಿತ್ತು. ರಿಲೀಸ್ ಗೂ ಮೊದಲು ಬೆಂಗಳೂರಿನ ಮನೆ ಮನೆಗೆ ಹೋಗಿ ತಮ್ಮ ಸಿನಿಮಾ ರಿಲೀಸ್ ಆಗುತ್ತಿದೆ ಹಾರೈಸಿ ಎಂದು ದೀಪ ಹಿಡಿದು ಕೇಳಿಕೊಂಡಿದ್ದಾರೆ. ಬಳಿಕ ನಾಯಕ ಗೌರಿ ಶಂಕರ್ ಅವರ ಪುತ್ರಿ ಪುಟ್ಟ ಕಂದ ಈಶ್ವರಿ ಮನ ಟ್ರೈಲರ್ ಮಾಡಿದಳು. ಟ್ರೈಲರ್‌ನಲ್ಲಿ ಮಲೆನಾಡಿ ಕೆರೆಬೇಟೆ ಜೊತೆಗೆ ‘ಅಂಟಿಕೆ ಪೆಂಟಿಗೆ..

ಸಂಸ್ಕೃತಿ ಕೂಡ ಹೈಲೆಟ್ ಆಗಿದೆ. ಅಂಟಿಕೆ ಪಿಂಟಿಗೆಯಿಂದನೆ ಟ್ರೈಲರ್ ಪ್ರಾರಂಭವಾಗಿದ್ದು ಅದ್ಭುತವಾಗಿ ಮೂಡಿ ಬಂದಿದೆ. ಮಲೆನಾಡಿನ ಹಳ್ಳಿಯಲ್ಲೇ ನಡೆಯುವ ಸಿನಿಮಾ ಇದಾಗಿದೆ. ಕೆರೆಬೇಟೆ ಜೊತೆಗೆ ಹಳ್ಳಿ ಜನರ ಕಿತ್ತಾಟ, ಹೊಡೆದಾಟ ಸೇರಿದಂತೆ ಈ ಪುಟ್ಟ ಟ್ರೈಲರ್‌ನಲ್ಲೇ ಮಲೆನಾಡಿನ ಸಂಪೂರ್ಣ ಚಿತ್ರಣ ನೋಡಬಹುದು. ಇನ್ನು ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲ ಮತ್ತು ನಿರೀಕ್ಷೆ ದುಪ್ಪಟ್ಟು ಮಾಡಿದೆ.

ನಾಯಕ ಗೌರಿ ಶಂಕರ್ ಅದ್ಭುತವಾಗಿ ನಟಿಸಿದ್ದಾರೆ. ಟ್ರೈಲರ್‌ನಲ್ಲಿ ತನ್ನ ನಟನೆಯ ಝಲಕ್ ತೋರಿಸಿದ್ದಾರೆ. ನಾಯಕಿ ಬಿಂಧು ಶಿವರಾಮ್ ಕೂಡ ತನ್ನ ಪಾತ್ರಕ್ಕೆ ಜೀವತುಂಬಿದ್ದಾರೆ. ಬಿಂಧು ಅವರಿಗೆ ಇದು ಮೊದಲ ಸಿನಿಮಾ. ಹಾಗಾಗಿ ತನ್ನ ಚೊಚ್ಚಲ ಸಿನಿಮಾದ ಬಗ್ಗೆ  ಸಿಕ್ಕಾಪಟ್ಟೆ ಎಕ್ಸಾಯಿಟ್ ಆಗಿದ್ದಾರೆ. ಇನ್ನೂ ಮಲೆನಾಡಿನ ಸುಂದರ ಸಂಸ್ಕೃತಿಯನ್ನು ಅಷ್ಟೇ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ರಾಜ್‌ಗುರು. ಸದ್ಯ ಟ್ರೈಲರ್ ಮೂಲಕ ಅಭಿಮಾನಿಗಳ ಮುಂದೆ ಬಂದಿರುವ ಕೆರೆಬೇಟೆ ಮುಂದಿನ ತಿಂಗಳು ಮಾರ್ಚ್ 15ಕ್ಕೆ ಅದ್ದೂರಿಯಾಗಿ ತೆರೆಗೆ ಬರುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos