ಕೇರಳದಲ್ಲಿರುವ ಈ ಅಂಗಡಿಯಲ್ಲಿ ಕೆಲಸಗಾರರೇ ಇಲ್ಲ.!

ಕೇರಳದಲ್ಲಿರುವ ಈ ಅಂಗಡಿಯಲ್ಲಿ ಕೆಲಸಗಾರರೇ ಇಲ್ಲ.!

ನ್ಯೂಸ್ ಎಕ್ಸ್ ಪ್ರೆಸ್, ಮಾ.7: ಸ್ವಿಜರ್‌ಲೆಂಡ್‌ನಲ್ಲಿ ಪ್ರಾಮಾಣಿಕತೆ ಅಂಗಡಿ ಇದೆಯಂತೆ. ಅಲ್ಲಿ ಅಂಗಡಿಯಲ್ಲಿ ಯಾರು ಇರುವುದಿಲ್ಲವಂತೆ. ಜನ ತಮಗೆ ಬೇಕಾದ ಸಾಮಾನು ತೆಗೆದುಕೊಂಡು ಸರಿಯಾಗಿ ದುಡ್ಡು ಇಡುತ್ತಾರಂತೆ.

ಹೀಗೆ ಬೇರೆ ದೇಶದ ಬಗ್ಗೆನೇ ನಾವು ಕೇಳಿದ್ದೇವು. ಈ ಅಂಗಡಿಯನ್ನು ನಮ್ಮ ದೇಶದಲ್ಲಿ ಊಹಿಸಿಕೊಳ್ಳಲು ಸಾಧ್ಯವಿದೆಯೇ? ಹೌದು, ಅಸಾಧ್ಯವೆನಿಸಿದರೂ, ಇದು ಸಾಧ್ಯವಾಗಿದೆ.

ಕೇರಳದಲ್ಲಿ ಇದನ್ನು ಊಹಿಸಿದವರು ಇದಾರೆ, ಹಾಗೆ ಅಂಗಡಿಯಿಟ್ಟು ಯಶಸ್ವಿಯಾದವರೂ ಇದ್ದಾರೆ. ಕಣ್ಣೂರಿನ ವಂಕುಲತವಯಲ್ ಎನ್ನುವ ಹಳ್ಳಿಯಲ್ಲಿ ಕೆಲಸಗಾರರೇ ಇರದ ಒಂದು ಅಂಗಡಿ ಇದೆ. ಅಲ್ಲಿ ಜನ ತಮಗೆ ಬೇಕಾದ ಸಾಮಗ್ರಿ ತೆಗೆದುಕೊಂಡು ಪೆಟ್ಟಿಗೆಯಲ್ಲಿ ದುಡ್ಡನ್ನು ಹಾಕುತ್ತಾರೆ. ಇನ್ನುವರೆಗೂ ಈ ಅಂಗಡಿಯಲ್ಲಿ ನಷ್ಟವಾಗಿಲ್ಲ.

ಜನಶಕ್ತಿ ಟ್ರಸ್ಟ್ ಎನ್ನುವ ಸ್ವಯಂ ಸೇವಾ ಸಂಸ್ಥೆ ಹಾಸಿಗೆ ಹಿಡಿದಿರುವ ಇಲ್ಲವೇ ವ್ಹೀಲ್ ಚೇರ್ನಲ್ಲಿರುವವರು ಉತ್ಪಾದಿಸಿದ ಗೃಹೋದ್ಯಮದ ಸಾಮಾನುಗಳನ್ನು ಮಾರುತ್ತಾರೆ. ಸಂಸ್ಥೆಯವರು ಹೇಳುವ ಪ್ರಕಾರ ಇದುವರೆಗೂ ಯಾರು ಅಲ್ಲಿ ಕಳ್ಳತನ ಮಾಡಿಲ್ಲ. ಕೆಲವು ಬಾರಿ ತಮ್ಮ ಬಿಲ್‌ಗಿಂತ ಜಾಸ್ತಿ ದುಡ್ಡನ್ನೇ ಇಟ್ಟು ಹೋಗಿರುತ್ತಾರೆ. ಈ ಹಳ್ಳಿಯ ಜನರಂತೆ ದೇಶದ ಜನ ಪ್ರಾಮಾಣಿಕರಾದರೆ ನಾವು ವಿಶ್ವದಲ್ಲೇ ಅಗ್ರಗಣ್ಯರಾಗುವುದರಲ್ಲಿ ಸಂದೇಹವಿಲ್ಲ.

ಫ್ರೆಶ್ ನ್ಯೂಸ್

Latest Posts

Featured Videos