ಕೇಂದ್ರ ಸಚಿವೆ ಸ್ಮೃತಿ ಇರಾನಿ ಪದವೀಧರೆ ಅಲ್ಲ

ಕೇಂದ್ರ ಸಚಿವೆ ಸ್ಮೃತಿ ಇರಾನಿ ಪದವೀಧರೆ ಅಲ್ಲ

ನವದೆಹಲಿ, ಏ. 12, ನ್ಯೂಸ್ ಎಕ್ಸ್ ಪ್ರೆಸ್: 2014ರ ಲೋಕಸಭಾ ಚುನಾವಣೆಯ ವೇಳೆ ನಾಮಪತ್ರ ಸಲ್ಲಿಸುವಾಗ ನೀಡಿದ ಅಫಿಡವಿಟ್ ನಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಪದವೀಧರೆ ಎಂದು ಮಾಹಿತಿ ನೀಡಿದ್ದರು. ಆದರೆ, ಈ ಬಾರಿ ತಾನು ಪದವೀಧರೆ ಅಲ್ಲ ಎಂದು ಮಾಹಿತಿ ಒದಗಿಸಿದ್ದಾರೆ.

ಅಮೇಠಿ ಲೋಕಸಭಾ ಕ್ಷೇತ್ರದಿಂದ ಆಯ್ಕೆ ಬಯಸಿರುವ ಸ್ಮೃತಿ ಇರಾನಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇವರಿಗೆ ಎದುರಾಳಿಯಾಗಿದ್ದಾರೆ.

ಅಫಿಡವಿಟ್ ನಲ್ಲಿ 1991ರಲ್ಲಿ ಸೆಕೆಂಡರಿ ಸ್ಕೂಲ್ ಪರೀಕ್ಷೆ ಮತ್ತು 1993ರಲ್ಲಿ ಸೀನಿಯರ್ ಸೆಕೆಂಡರು ಸ್ಕೂಲ್ ಪರೀಕ್ಷೆ ಪಾಸಾಗಿರುವ ಬಗ್ಗೆ ಮಾಹಿತಿ ಒದಗಿಸಿದ್ದಾರೆ. 1994ರಲ್ಲಿ ದಿಲ್ಲಿ ಮುಕ್ತ ವಿವಿಯ 3 ವರ್ಷಗಳ ಬಿ.ಕಾಂ ಪದವಿಯ ಮೊದಲ ವರ್ಷದ ಕೋರ್ಸ್ ಪೂರ್ಣಗೊಳಿಸಿಲ್ಲ ಎಂಬ ವಿವರ ನೀಡಿದ್ದಾರೆ.

2014ರ ಚುನಾವಣೆಯ ವೇಳೆ ಪದವೀಧರೆ ಎಂದು ಸುಳ್ಳು ಮಾಹಿತಿ ನೀಡಿ ವಿಪಕ್ಷಗಳ ಟೀಕೆಗೆ ಗುರಿಯಾಗಿದ್ದರು. ಆಕೆ ಪದವೀಧರೆ ಅಲ್ಲವೆಂದು ವಿಪಕ್ಷಗಳು ವಾದಿಸಿತ್ತು. ಇದೊಂದು ವಿವಾದಕ್ಕೆ ಕಾರಣವಾಗಿತ್ತು.

 

ಫ್ರೆಶ್ ನ್ಯೂಸ್

Latest Posts

Featured Videos