ಕೆಂಪೇಗೌಡ ಪ್ರಶಸ್ತಿ ಆಯ್ಕೆಗೆ ಸಮಿತಿ ರಚನೆ

ಕೆಂಪೇಗೌಡ ಪ್ರಶಸ್ತಿ ಆಯ್ಕೆಗೆ ಸಮಿತಿ ರಚನೆ

ಬೆಂಗಳೂರು, ಆ. 6:  ಪಾಲಿಕೆ ವತಿಯಂದ ಆಚರಿಸಲಾಗುವ ಕೆಂಪೇಗೌಡ ಜಯಂತಿ ಅಂಗವಾಗಿ ನೀಡಲಾಗುವ ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರ ಆಯ್ಕೆ ಮಾಡಲು ನಿವೃತ್ತ ನ್ಯಾಯಾಧೀಶ ಎ.ಜೆ. ಸದಾಶಿವ ನೇತೃತ್ವದಲ್ಲಿ ಹತ್ತು ಜನರ ಸಮಿತಿ ರಚಿಸಲಾಗಿದೆ.

ರಾಜಧಾನಿ ಅಭಿವೃದ್ಧಿ ಯೋಜನೆ ಗಳಿಗೆ ಒತ್ತು ನೀಡಿ ಶ್ರಮಿಸಿದವರಿಗೆ ಕೊಡಮಾಡುವ ಪ್ರಶಸ್ತಿ ಇದಾಗಿದೆ. ಕಳೆದ ವರ್ಷ 530 ಕ್ಕೂ ಹೆಚ್ಚು ಮಂದಿಗೆ ಪ್ರಶಸ್ತಿ ನೀಡಿ ಇಡೀ ಸಮಾರಂಭ ನಗೆಪಾಟಲೀಗಿಡಾಗಿ ಸಾರ್ವಜನಿಕರ ಟೀಕೆಗೆ ಗುರಯಾಗಿತ್ತು.

ಪ್ರಶಸ್ತಿ ಘನತೆ ಕಾಪಾಡಿಕೊಳ್ಳುವ ಸದುದ್ದೇಶದಿಂದ  ಪ್ರಸಕ್ತ ಸಾಲಿಗೆ ಪ್ರಶಸ್ತಿ ಪುರಸ್ಕೃತರ ಸಂಖ್ಯೆಯನ್ನು ಕೇವಲ 70 ಮಂದಿಗೆ ಸೀಮಿತ ಗೊಳಿಸಲಾಗಿದೆ.

ಏಳು ತಜ್ಞರ ಸಮಿತಿ : ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರ ಆಯ್ಕೆ ಹೊಣೆಯನ್ನು ನಿವೃತ್ತ ನ್ಯಾಯ ಮೂರ್ತಿಗಳಿಗೆ ವಹಿಸಲಾಗಿದೆ.

ಚಿತ್ರಕಲೆ, ಲಲಿತಕಲೆ, ಸಮಾಜಸೇವೆ, ಸಾಹಿತ್ಯ, ಲೇಖಕರು, ಚಲನಚಿತ್ರ, ನೃತ್ಯ, ಸಂಗೀತ, ಕ್ರೀಡೆ, ಮತ್ತು ಪತ್ರಿಕೋದ್ಯಮ ಕ್ಷೇತ್ರಗಳಲ್ಲಿರುವ ನೂರಿತ ಪ್ರಜ್ಞಾವಂತ ತಜ್ಞರನ್ನು ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಸಮಿತಿಯಲ್ಲಿ ಏಳು ತಜ್ಞರಿದ್ದು, ನಾಲ್ವರು ಮಹಿಳೆಯರಿದ್ದಾರೆ.

ಇಬ್ಬರು ಬಿಬಿಎಂಪಿ ಅಧಿಕಾರಿಗಳನ್ನೊಳಗೊಂಡ  ಸದಸ್ಯಕಾರ್ಯದರ್ಶಿ ಮತ್ತು ಸಹಸದಸ್ಯಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಸಮಿತಿಯ ತಜ್ಞರಲ್ಲಿ ಒಬ್ಬರನ್ನು ಸಂಚಾಲಕರಾಗಿ ನೇಮಕ ಮಾಡಲಾಗುತ್ತದೆ.

400 ಅರ್ಜಿಗಳು: ಬಿಬಿಎಂಪಿ ಪ್ರಶಸ್ತಿ ನೀಡುವದು ಕೇವಲ 70 ಜನರಿಗೆ ಮಾತ್ರ ಈಗಾಗಲೇ 400 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆ ಆಗಿವೆ. ಅರ್ಜಿಗಳನ್ನು ತಜ್ಞರ ಸಮಿತಿ ಮುಂದಿಟ್ಟು ಅರ್ಹರನ್ನು ಆಯ್ಕೆ ಮಾಡಿ 140 ಅರ್ಜಿಗಳನ್ನು ಪ್ರತ್ಯೇಕ ಮಾಡಲಾಗಿದೆ. ಅರ್ಹ 70  ಮಂದಿ ಸಾಧಕರನ್ನು ಪ್ರಶಸ್ತಿ ಗೆ ಆಯ್ಕೆ ಮಾಡಲಾಗುತ್ತದೆ. ಹತ್ತು ಮಂದಿ ಮಹಿಳೆಯರನ್ನು ಲಕ್ಷ್ಮೀದೇವಿ ಪ್ರಶಸ್ತಿಗೆ ಸಮಿತಿಯೇ ಆಯ್ಕೆ ಮಾಡಲಿದೆ.

ಪ್ರಶಸ್ತಿ ಮೊತ್ತ ಹೆಚ್ಚಳ: ಪ್ರಶಸ್ತಿ ಮೊತ್ತವನ್ನು 10 ಸಾವಿರದಿಂದ 25 ಸಾವಿರ ರೂ ವರೆಗೆ ನೀಡುತ್ತಿದ್ದ ಮೊತ್ತವನ್ನು 50ಸಾವಿರ ರೂ ಗೆ ಏರಿಕೆ ಮಾಡಲಾಗಿದೆ. ಲಕ್ಷ್ಮೀದೇವಿ ಪ್ರಶಸ್ತಿಗೆ ಪ್ರಶಸ್ತಿ ಫಲಕದೊಂದಿಗೆ 25 ಸಾವಿರ ರೂ ನೀಡಲಾಗತ್ತದೆ.

ಆಗಷ್ಟ್ 21 ರಂದು ಜಯಂತಿ : ಪ್ರತಿ  ವರ್ಷ ಬೆಂಗಳೂರು ಕರಗದಂದು ಕೆಂಪೇಗೌಡ ಜಯಂತಿ ಆಚರಣೆ ಮತ್ತು ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮ ನಡೆಯುತ್ತಿತ್ತು. ಲೋಕಸಭಾ ಚುನಾವಣೆ ನೀತಿಸಂಹಿತೆ ಇದ್ದ ಕಾರಣ ವಿಳಂಬ ಆಗಿದ್ದು, ಆಗಷ್ಟ್ 21 ರಂದು ಕಾರ್ಯಕ್ರಮ ಆಯೋಜನೆ ಮಾಡಲು ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಅವರನ್ನು ಮೇಯರ್ ಗಂಗಾಂಭಿಕೆ ಅವರು ಆಹ್ವಾನ ಮಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos