‘ಮೋದಿ’ ಗುಹೆಯಲ್ಲಿ ಕುಳಿತು ಸಾಧಿಸಿದ್ದಾದ್ರೂ ಏನು?

‘ಮೋದಿ’ ಗುಹೆಯಲ್ಲಿ ಕುಳಿತು ಸಾಧಿಸಿದ್ದಾದ್ರೂ ಏನು?

ನವದೆಹಲಿ, ಮೇ. 20, ನ್ಯೂಸ್ ಎಕ್ಸ್ ಪ್ರೆಸ್ : ಹಿಮಾಲಯದ ತಪ್ಪಲಿನಲ್ಲಿರುವ ಕೇದಾರನಾಥ ಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿರುವುದನ್ನು ನೀತಿ ಸಂಹಿತೆ ಉಲ್ಲಂಘನೆಯಾಗಿದೆ  ಎಂದು ವಿಪಕ್ಷಗಳು ಆರೋಪಿಸಿವೆ.’ಲೋಕಸಭಾ ಚುನಾವಣೆ 2019ರ ಕೊನೆಯ ಹಂತದ ಚುನಾವಣೆಗಿಂತಲೂ ಮೋದಿ ಧ್ಯಾನ ಹೆಚ್ಚು ಸುದ್ದಿಯಾಗಿದೆ. ಪ್ರಧಾನಿ ಮೋದಿ ಕೇದಾರನಾಥ ದೇವಸ್ಥಾನದ ಬಳಿಯ ಗುಹೆಯಲ್ಲಿ ಮಾಡಿದ ಧ್ಯಾನದ ಬಗ್ಗೆ ಎಲ್​ಜೆಡಿ ಪಕ್ಷದ ನಾಯಕ ಶರದ್ ಯಾದವ್ ವ್ಯಂಗ್ಯವಾಡಿದ್ದಾರೆ.

ಎಲ್​ಜೆಡಿ ಪಕ್ಷದ ನಾಯಕ ಶರದ್ ಯಾದವ್ ವ್ಯಂಗ್ಯವಾಡಿ,ಕೇದಾರನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಮೋದಿ, ಅಲ್ಲಿನ ಗುಹೆಯಲ್ಲಿ ಕುಳಿತು ಧ್ಯಾನ  ಮಾಡಿದ್ದಾರೆ. ಪ್ರಪಂಚದಲ್ಲಿ ಅತೀ ದೊಡ್ಡ ಪ್ರಜಾಪ್ರಭುತ್ವ ಹೊಂದಿರೋ ದೇಶದ ಪ್ರಧಾನಿ ಗುಹೆಯೊಳಗೆ ಕುಳಿತುಕೊಳ್ಳುತ್ತಾರೆ. ಅದ್ದರಿಂದ ಅವರು ಸಾಧಿಸಿದ್ದಾದರು ಏನು?  ಅಲ್ಲಿ ಯಾವುದಾದರು ಸಂಶೋಧನೆ ನಡೆಸಿದ್ರಾ? ಅಥವಾ ಲೋಕಸಭಾ ಚುನಾವಣೆಯನ್ನ ಕೀರ್ತನ್ ಸಭಾ ಆಗಿ ಬದಲಾಯಿಸಲು ಪ್ರಯತ್ನಿಸುತ್ತಿದ್ದಾರಾ? ಎಂದು ಶರದ್ ಯಾದವ್ ತರಾಟೆ ತೆಗೆದುಕೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos