“ಕತ್ತಲಿನಲ್ಲಿ ಕುಳಿತು ಕಲ್ಲು ಹೊಡೆಯುವ ಜಾಯಮಾನದವನಲ್ಲ…” ರಮೇಶ್ ಜಾರಕಿಹೊಳಿ

“ಕತ್ತಲಿನಲ್ಲಿ ಕುಳಿತು ಕಲ್ಲು ಹೊಡೆಯುವ ಜಾಯಮಾನದವನಲ್ಲ…” ರಮೇಶ್ ಜಾರಕಿಹೊಳಿ

ಬೆಳಗಾವಿ, ಏ. 23, ನ್ಯೂಸ್ ಎಕ್ಸ್ ಪ್ರೆಸ್: ಇನ್ನು  ಇಂದು ಸ್ವಕ್ಷೇತ್ರ ಗೋಕಾಕ್‍ನಲ್ಲಿ ಮತ ಚಲಾಯಿಸಿದ ಬಳಿಕ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದು ಖಚಿತ. ಯಾವಾಗ ರಾಜೀನಾಮೆ ನೀಡುತ್ತೇನೆ ಎಂಬುದನ್ನು ಸದ್ಯದಲ್ಲೇ ಬಹಿರಂಗಪಡಿಸುತ್ತೇನೆ ಎಂದು ರಮೇಶ್ ಜಾರಕಿ ಹೊಳಿ ಹೇಳಿದರು. ನಾನಿನ್ನು ತಾಂತ್ರಿಕವಾಗಿ ಕಾಂಗ್ರೆಸ್‍ನಲ್ಲೇ ಉಳಿದಿದ್ದೇನೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‍ನ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸುತ್ತೇನೆ. ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರ್ಕಾರ ಉಳಿಯುವುದಿಲ್ಲ ಎಂದು ಭವಿಷ್ಯ ನುಡಿದರು. ನಾನು ಕತ್ತಲಿನಲ್ಲಿ ಕುಳಿತು ಕಲ್ಲು ಹೊಡೆಯುವ ಜಾಯಮಾನದವನಲ್ಲ. ಏನಿದ್ದರೂ ನೇರವಾಗಿ ಮಾತನಾಡುವವನು. ಸುಳ್ಳು ಹೇಳುವವರ ಬಗ್ಗೆ ನಾನು ಪ್ರತಿಕ್ರಿಯೆ ನೀಡಬೇಕಾದ ಅಗತ್ಯವಿಲ್ಲ ಎಂದರು.

ರಮೇಶ್ ಜಾರಕಿಹೊಳಿಯವರು ಬಿಜೆಪಿಗೆ ಹೋಗುವುದಾದರೆ ಹೋಗಿ ಬಿಡಲಿ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು. ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ರಮೇಶ್ ಬಿಜೆಪಿಗೆ ಹೋಗುವುದಾಗಿ ಹೇಳಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ರಮೇಶ್ ಜಾರಕಿ ಹೊಳಿ ಅನಿವಾರ್ಯವಲ್ಲ, ಬೇರೆಯವರೂ ಅನಿವಾರ್ಯವಲ್ಲ ಎಂಬುದನ್ನು ಮೊದಲು ಅವರು ಅರಿಯಲಿ ಎಂದರು. ಪದೇ ಪದೇ ರಾಜೀನಾಮೆ, ರಾಜೀನಾಮೆ ಎಂದು ಹೇಳುತ್ತಲೇ ಇದ್ದಾರೆ ಅವರು ರಾಜೀನಾಮೆ ಕೊಡುವುದಾದರೆ ಕೊಡಲಿ ಬಿಡಿ. ಅವರು ಬಿಜೆಪಿಗೆ ಹೋದ ನಂತರ ನಾನು ಮಾತನಾಡುತ್ತೇನೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos