ಮದುಮಗಳಾಗಿ ‘ಕತ್ರಿನಾ’ ಮಿಂಚು

ಮದುಮಗಳಾಗಿ ‘ಕತ್ರಿನಾ’ ಮಿಂಚು

  ಮುಂಬೈ: ‘ಭಾರತ್’ ಚಿತ್ರದಲ್ಲಿ ಬಾಲಿವುಡ್ ನಟಿ ಕತ್ರಿನಾ ಮದುಮಗಳಾಗಿ ಮಿಂಚಿದ್ದರು. ಇದು ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಟ ಸಲ್ಮಾನ್ ಖಾನ್ ಅವರನ್ನು ಮದುವೆಯಾಗಲು ಕತ್ರಿನಾ ಕ್ಯಾಥೋಲಿಕ್ ಬ್ರೈಡೆಡ್ ಲುಕ್‍ನಲ್ಲಿ ನಟಿಸಿದ್ದರು. ಈ ಲುಕ್‍ನಲ್ಲಿ ಕತ್ರಿನಾ ಬಿಳಿ ಬಣ್ಣದ ಗೌನ್ ಧರಿಸಿ ಸುಂದರವಾಗಿ ಕಾಣಿಸುತ್ತಿದ್ದಾರೆ.

ಕತ್ರಿನಾ ಈ ಗೌನ್ ಧರಿಸಿ ಸಿಂಪಲ್ ಆಗಿ ಮೇಕಪ್ ಮಾಡಿಕೊಂಡಿದ್ದಾರೆ. ಕತ್ರಿನಾ ಕೈಫ್ ಧರಿಸಿರುವ ಈ ಗೌನ್‍ನನ್ನು ಸಲ್ಮಾನ್ ಖಾನ್ ಅವರ ಪರ್ಸನಲ್ ಡಿಸೈನರ್ ಎಶೇಲೆ ರೆಬೆಲೋ ವಿನ್ಯಾಸ ಮಾಡಿದ್ದಾರೆ. ಸದ್ಯ ಭಾರತ್ ಚಿತ್ರದಲ್ಲಿ ಕತ್ರಿನಾ ಕುಮುದ್ ರೈನಾ ಪಾತ್ರದಲ್ಲಿ ನಟಿಸಿದ್ದು, ಈ ಚಿತ್ರದಲ್ಲಿ ಇದು ಅವರ ಬೆಸ್ಟ್ ಲುಕ್ ಆಗಿದೆ. ಸದ್ಯ ಭಾರತ್ ಚಿತ್ರ ಭಾರತದಲ್ಲಿ ಇದುವರೆಗೂ 160 ಕೋಟಿ ರೂ. ಕಲೆಕ್ಷನ್ ಆಗಿದ್ದು, ವಿಶ್ವಾದ್ಯಂತ 250 ಕೋಟಿ ರೂ. ಕಲೆಕ್ಷನ್ ಆಗಿದೆ.

ಫ್ರೆಶ್ ನ್ಯೂಸ್

Latest Posts

Featured Videos