ಅಡ್ವಾನ್ಸ್‌ ಬುಕ್ಕಿಂಗ್‌: ಇತಿಹಾಸ ಸೃಷ್ಟಿಸಿದ ಕಾಟೇರ!

ಅಡ್ವಾನ್ಸ್‌ ಬುಕ್ಕಿಂಗ್‌: ಇತಿಹಾಸ ಸೃಷ್ಟಿಸಿದ ಕಾಟೇರ!

ಬೆಂಗಳೂರು: ದರ್ಶನ್ ನಟನೆಯ ಕಾಟೇರ ಸಿನಿಮಾ ಡಿಸೆಂಬರ್‌ 29 ರಂದು ಸಿನಿಮಾ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. ಮಧ್ಯರಾತ್ರಿ 12 ಗಂಟೆಗೆ ಹಲವೆಡೆ ಕಾಟೇರ ಮೊದಲ ಶೋ ಆರಂಭವಾಗಲಿದೆ.

ಈಗಾಗಲೇ ಅಡ್ವಾನ್ಸ್‌ ಬುಕಿಂಗ್‌ ಶುರುವಾಗಿದೆ. ವರ್ಷಾಂತ್ಯಕ್ಕೆ ‘ಕಾಟೇರ’ ಸಿನಿಮಾ ತೆರೆಗೆ ಬರುತ್ತಿದ್ದು, ತರುಣ್ ಕಿಶೋರ್ ಸುಧೀರ್ ನಿರ್ದೇಶನ ಮಾಡಿದ್ದಾರೆ. ರಾಬರ್ಟ್ ನಂತರ ಎರಡನೇ ಬಾರಿಗೆ ಈ ಜೋಡಿ ಕೈ ಜೋಡಿಸಿದ್ದು, ಸಿನಿಮಾ ಭಾರೀ ನಿರೀಕ್ಷೆ ಹುಟ್ಟಿಸಿದೆ.

ಇತಿಹಾಸದಲ್ಲಿ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಅಲ್ಲದ ಸಿನಿಮಾವೊಂದು ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ ಇಂತಹ ದಾಖಲೆ ಮಾಡಿದೆ. ಬರೋಬ್ಬರಿ ಒಂದು ಕೋಟಿ ರೂಪಾಯಿಯ ಕಲೆಕ್ಷನ್ ಮಾಡಿದೆ ಕಾಟೇರ ತಂಡ.  ಒಂದು ಕೋಟಿಗೂ ಹೆಚ್ಚು ಹಣ ಕಲೆಕ್ಟ್ ಮಾಡಿರುವ ಕಾಟೇರ ತಂಡ ಇಲ್ಲಿಯವರೆಗೆ ಬರೋಬ್ಬರಿ 50 ಸಾವಿರಕ್ಕೂ ಹೆಚ್ಚು ಟಿಕೆಟ್ ಮಾರಾಟ ಮಾಡಿದೆ.

ಫ್ರೆಶ್ ನ್ಯೂಸ್

Latest Posts

Featured Videos