ಕಸಬಾ ರಾಜಸ್ವ ನೀರಿಕ್ಷಕ ಪ್ರಕಾಶ್ ಅವರಿಗೆ ಬೀಳ್ಕೊಡುಗೆ ಸಮಾರಂಭ

ಕಸಬಾ ರಾಜಸ್ವ ನೀರಿಕ್ಷಕ ಪ್ರಕಾಶ್ ಅವರಿಗೆ ಬೀಳ್ಕೊಡುಗೆ ಸಮಾರಂಭ

ಬೆಂಗಳೂರು, ಆ.08: ಹೊಸಕೋಟೆ ತಾಲ್ಲೂಕು ಕಸಬಾ ಹೋಬಳಿಯ ರಾಜಸ್ವ ನೀರಿಕ್ಷಕರಾ ಪ್ರಕಾಶ್ ರವರು ಪಕ್ಕದ ದೇವನಹಳ್ಳಿಗೆ ವರ್ಗವಣೆ ಗೊಂಡಿದ್ದು ಇಂದು ಅವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ತಾಲ್ಲೂಕು ತಾಸೀಲ್ದಾರ್ ಕೆ. ರಮೇಶ್ ಮಾತನಾಡಿ ಸರ್ಕಾರಿ ಕೆಲಸವೇ ಅಂತದ್ದು ಇವತ್ತು ಈ ಊರು ನಾಳೆ ಇನ್ನೊಂದೂರು ಹೋಗಲೆ ಬೇಕು. ಆದರೆ ನಾವು ಇದ್ದ ಸ್ಥಳದಲ್ಲಿ ನಾವು ಏನು ಮಾಡಿದ್ದೇವೆ ಎಂಬುದು ನಮ್ಮ ಹಿಂದೆ ಬರುವುದು, ಅಂದರೆ ಒಳ್ಳಯದನ್ನು ಮಾಡಿದ್ದರೆ ಜನರು ಈಗ ಪ್ರಕಾಶ್ ಅವರನ್ನು ಹೊಗಳಿದಂತೆ ಯಾವೋಬ್ಬ ಅಧಿಕಾರಿ ಕರ್ತವವನ್ನು ನಿಷ್ಠೆಯಿಂದ ಮಾಡುತ್ತಾರೊ ಅಂತಹವರು ಎಲ್ಲಿ ಹೋದರು ಒಳ್ಳೆಯ ಹೆಸರನ್ನು ಪಡೆಯುತ್ತಾರೆ ಎಂದು ಹೇಳಿದರು.
ನಂತರ ಮಾತನಾಡಿ ಪ್ರಕಾಶ್ ನಾನು 10 ವರ್ಷಗಳಿಂದ ಈ ತಾಲ್ಲೂಕಿನಲ್ಲಿ ಇದ್ದೇನೆ ಅನೇಕ ಏಳು ಬೀಳುಗಳನ್ನು ಕಿಂಡಿದ್ದೇನೆ. ಹಾಗೇಯೆ ಹರಿಯುವ ನದಿಯಂತಾಗಬೇಕು. ನಿಂತ ನೀರಾಗಬಾರದು ನಮ್ಮ ಸೇವೆ ಎಲ್ಲಿಗೋದರು ಮಾಡಲೇ ಬೇಕು ಸರ್ಕಾರಿ ಕೆಲಸ ಮಾಡಬೇಕಾದರೇ ಪ್ರಮಾಣಿಕವಾಗಿ ಮಾಡಿ ನೀಮ್ಮ ಕೈಲಿ ಸಹಾಯವಾಗೊದಿದ್ದರೆ ಮಾಡಿ ಇಲ್ಲವಾದರೆ ಯಾರಿಗೂ ತೊಂದರೆ ಕೋಡಬೇಡಿ.
ಕಾನೂನು ಪ್ರಕಾರ ಮಾಡಿ ಇನ್ನು ಮುಂದೆ ಇನ್ನು ಸರ್ಕಾರಿ ಕೆಲಸ ಮಾಡುವುದು ತುಂಬ ಕಷ್ಟದ ಕೆಲಸ ಅದನ್ನು ಅರಿತು ನೀವು ಮನ್ನಡೆಯಬೇಕು ಎಂದು ಪ್ರಕಾಶ್ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರೇಡ್-೨ ಭಾರತಿ, ಜಡಿಗೇನಹಳ್ಳಿ ಡಿ.ಟಿ ಮುರಳಿ, ಸುಲಿಬೆಲೆ ಆರ್.ಐ ಸತೀಶ್, ನೂತನ ಕಸಬಾ ಆರ್.ಐ ಎಂ.ಆರ್ ರಾಜೇಂದ್ರ ಪ್ರಸಾದ್, ಆಲಪನಹಳ್ಳಿ ವಿ.ಎ ಮಂಜುನಾಥ್, ಕಂದಾಯ ಇಲಾಖೆಯ ಸಿಬ್ಬಂದಿ ಹಾಗೂ ಗ್ರಾಮ ಲೇಕ್ಕಿಗರು ಸಹಾಯಕರು ಹಾಜರಿದ್ದು ಬೀಳ್ಕೊಟ್ಟರು.

ಫ್ರೆಶ್ ನ್ಯೂಸ್

Latest Posts

Featured Videos