ಕೋತಿ ಕೇಕ್ ಕದ್ದ ವಿಡಿಯೋ ವೈರಲ್..!

ನವದೆಹಲಿ, ಡಿ. 19 : ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ನಗೆಗಡಲಲ್ಲಿ ತೇಲಿಸುವಂತಹ ಕಾಮಿಡಿ ವಿಡಿಯೋಗಳನ್ನು ನೋಡುತ್ತಿರುತ್ತೇವೆ. ಆ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದ್ದು, ಮಂಗ ಮತ್ತು ಮಾನವನ ನಡುವೆ ಜರುಗಿದ ಪ್ರಸಂಗ ಎಂತಹವರನ್ನು ಒಮ್ಮೆ ಸ್ಮೈಲ್ ಮಾಡುವಂತೆ ಮಾಡುತ್ತದೆ.
ಹೌದು, ಮಂಗವೊಂದು ಬರ್ತ್ಡೇ ಕೇಕ್ ಅನ್ನು ಕದಿಯುವ ವಿಡಿಯೋವೊಂದು ಸದ್ಯ ಜಾಲತಾಣದಲ್ಲಿ ಗಿರಕಿ ಹೊಡೆಯುತ್ತಿದೆ. 21 ಸೆಕೆಂಡ್ ಉದ್ದದ ವಿಡಿಯೋಗೆ ತನ್ನ ಅವಕಾಶಕ್ಕಾಗಿ ಕಾದು ಕುಳಿತು ಅದನ್ನು ಪಡೆದುಕೊಂಡ ಎಂಬ ಅಡಿಬರಹವನ್ನು ನೀಡಲಾಗಿದೆ.
ವಿಡಿಯೋದಲ್ಲಿ ಏನಿದೆ?: ಯುವಕನೊಬ್ಬ ಅರಣ್ಯ ಪ್ರದೇಶದಲ್ಲಿ ಸ್ನೇಹಿತರು ಮತ್ತು ಸಂಬಂಧಿಕರೊಟ್ಟಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುತ್ತಾನೆ. ಬಂಡೆಯ ಮೇಲೆ ಚಾಕೋಲೆಟ್ ಕೇಕ್ ಇಟ್ಟು ಒಂದು ತುಣುಕನ್ನು ಕತ್ತರಿಸಿ ಮೇಲೆತ್ತಿದ ಕ್ಷಣಾರ್ಧದಲ್ಲಿ ಮಂಗವೊಂದು ಉಳಿದ ಸಂಪೂರ್ಣ ಕೇಕ್ ಅನ್ನು ಹೊತ್ತು ಮರದ ತುತ್ತ ತುದಿಗೆ ಓಡುತ್ತದೆ.
ವಿಡಿಯೋವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ ಬಳಿಕ ವೈರಲ್ ಆಗಿದ್ದು, ಈವರೆಗೂ ಮೂರು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. 6 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಸಾಕಷ್ಟು ಮಂದಿ ವಿಡಿಯೋ ಕುರಿತು ತಮ್ಮದೇ ರೀತಿಯಲ್ಲಿ ವಿಡಿಯೋ ಮತ್ತು ಫೋಟೋಗಳನ್ನು ಹರಿಬಿಡುವ ಮೂಲಕ ಹಾಸ್ಯ ಚಟಾಕಿ ಹಾರಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos