ಶಾಲೆಯ ಬಳಿ ಕಸದ ರಾಶಿ

ಶಾಲೆಯ ಬಳಿ ಕಸದ ರಾಶಿ

ಪೀಣ್ಯದಾಸರಹಳ್ಳಿ, ಆ. 7: ಚಿಕ್ಕಬಾಣಾವರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ರಾಶಿರಾಶಿ ಕಸವಿದೆ, ಸುಮಾರು ತಿಂಗಳಿಂದ ಸಾರ್ವಜನಿಕರು ಪ್ರತಿನಿತ್ಯ ಕಸವನ್ನು ಹಾಕುತ್ತಿದ್ದಾರೆ. ಇದರಿಂದ ಶಾಲೆಯ ಮಕ್ಕಳು ದುರ್ನಾತದಲ್ಲೇ ಪಾಠಕೇಳುವ ಪರಿಸ್ಥಿತಿ ಹಾಗೂ ರಸ್ತೆಯ ಬದಿಯಲ್ಲಿ ಕಸವಿರುವುದರಿಂದ ಜನರಿಗೂ ಕಿರಿಕಿರಿ ಉಂಟಾಗಿದೆ.
‘ಸುತ್ತಮುತ್ತಲಿನ ರಸ್ತೆಯ ಮನೆಯವರು ಪ್ರತಿನಿತ್ಯ ಕಸ ಹಾಕುತ್ತಾರೆ. ನಮ್ಮ ಟೀಚರ್ಸ್ ಇಲ್ಲಿ ಬೋರ್ಡ ಬರೆದು ಹಾಕಿದರೂ ಕಿತ್ತೆಸೆದು ಕಸ ಹಾಕುತ್ತಾರೆ. ಎಷ್ಟೋ ಸಲ ಇಲ್ಲಿರುವ ಪೋಷಕರಿಗೆ, ಪಂಚಾಯ್ತಿಯವರಿಗೆ ಹೇಳಿದರೂ ಪ್ರಯೋಜನವಾಗಿಲ್ಲ’ ಎಂದು ಏಳನೇ ತರಗತಿ ವಿದ್ಯಾರ್ಥಿಗಳಾದ ಸಾಧನ್ ಹಾಗೂ ವಿಕಾಸ್ ಬೇಸರ ವ್ಯಕ್ತಪಡಿಸಿದರು.
‘ಪ್ರತಿ ಬಾರಿ ಮೀಟಿಂಗ್ನಲ್ಲಿ ಕಸದ ಸಮಸ್ಯೆಯ ಬಗ್ಗೆ ಮಾತನಾಡಿದ್ದೇನೆ. ಆದರೂ ಕ್ರಮ ಕೈಗೊಳ್ಳುವುದಿಲ್ಲ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ನಿರ್ಲಕ್ಷ್ಯ ವಹಿಸುತ್ತಿದ್ದು, ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಬರುತ್ತಿಲ್ಲ’ ಎಂದು ಪಂಚಾಯ್ತಿ ಸದಸ್ಯ ಬಿ.ಎಲ್.ಎನ್.ಸಿಂಹ ಆಕ್ರೋಶ ವ್ಯಕ್ತಪಡಿಸಿದರು.
‘ಶಾಲೆಯ ಬಳಿ ಕಸ ತೆಗೆಯುವುದಕ್ಕೆ ಹೇಳಿದ್ದೆವು ಆದರೂ ತೆಗೆದಿಲ್ಲ ನಾಳೆ ತೆಗೆಸುತ್ತೇನೆ’ ಎಂದು ಪಂಚಾಯ್ತಿ ಅಧ್ಯಕ್ಷ ಚನ್ನಕೇಶವ ಹೇಳಿದರು.
‘ಈಗಾಗಲೇ ಪಂಚಾಯ್ತಿ ಕಚೇರಿ ಮುಂದಿರುವ ಕಸವನ್ನೆಲ್ಲ ತೆಗೆಸಿದ್ದೇವೆ ಶಾಲೆಯ ಬಳಿ ಇರುವ ಕಸವನ್ನು ಸಹ ನಾಳೆ ತೆಗೆಸುತ್ತೇನೆ’ ಎಂದು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸಿ.ಎಂ.ರಾಮಕೃಷ್ಣ ಹೇಳಿದರು.

 

ಫ್ರೆಶ್ ನ್ಯೂಸ್

Latest Posts

Featured Videos