ಕರುಗಳಿಗೆ ರಾಮ, ಲಕ್ಷ್ಮಣ, ಸೀತೆ ಹೆಸರಿಟ್ಟ ರಂಗಪ್ಪ

ಕರುಗಳಿಗೆ ರಾಮ, ಲಕ್ಷ್ಮಣ, ಸೀತೆ ಹೆಸರಿಟ್ಟ ರಂಗಪ್ಪ

ಚಿಕ್ಕಮಗಳೂರು, ಅ. 17 : ಹಸುವೊಂದು ಎರಡು ಗಂಡು ಮತ್ತು ಒಂದು ಹೆಣ್ಣು ಕರುವಾಗಿದ್ದು, ಕರುಗಳಿಗೆ ರಾಮ, ಲಕ್ಷ್ಮಣ, ಸೀತೆ ಎಂದು ಹೆಸರಿಟ್ಟಿದ್ದಾರೆ. ಸಾಮಾನ್ಯವಾಗಿ ಹಸುವೊಂದು ಒಮ್ಮೆಗೆ ಒಂದು ಕರುವಿಗೆ ಜನ್ಮ ನೀಡುತ್ತದೆ. ಹಸು ಏಕಕಾಲದಲ್ಲಿ ಮೂರು ಕರುಗಳಿಗೆ ಜನ್ಮ ನೀಡಿದ್ದು ವಿಶೇಷ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ನಂದಿಪುರ ಗ್ರಾಮದ ರಂಗಪ್ಪ ಎಂಬುವರಿಗೆ ಸೇರಿದ ಲಕ್ಷ್ಮಿ ಎಂಬ ಹೆಸರಿನ ದೇಸಿ ತಳಿಯ ಹಸು ಮೂರು ಕರು ಹಾಕಿದ ಹಿನ್ನೆಲೆ ಮನೆಗೆ ಲಕ್ಷ್ಮಿ ಬಂದಂತೆ ಎಂದು ಸಂತೋಷಗೊಂಡಿರುವ ರಂಗಪ್ಪ ಅವರು ಮೂರು ಕರುಗಳಿಗೆ ಪೂಜೆ ಮಾಡಿದ್ದು, ನಾಮಕರಣವನ್ನೂ ನೆರವೇರಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos