ಸಮಗ್ರ ಅಭಿವೃದ್ಧಿ ಹೊಂದಿದ ರಾಜ್ಯಗಳಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ

ಸಮಗ್ರ ಅಭಿವೃದ್ಧಿ ಹೊಂದಿದ ರಾಜ್ಯಗಳಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ

ಬೆಂಗಳೂರು: ಆರ್ಥಿಕ ಪ್ರಗತಿ, ಹಣದುಬ್ಬರ ಹಾಗೂ ವಿತ್ತೀಯ ಕೊರತೆ ನಿರ್ವಹಣೆ ವಿಚಾರದಲ್ಲಿ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಸುಧಾರಣೆ ಕಂಡಿದ್ದು, ದೇಶದಲ್ಲೇ ನಂ.2 ಸ್ಥಾನಕ್ಕೇರಿದೆ ಎಂದು ರೇಟಿಂಗ್‌ ಏಜೆನ್ಸಿಯಾಗಿರುವ ಕ್ರಿಸಿಲ್‌ ತನ್ನ ವರದಿಯಲ್ಲಿ ತಿಳಿಸಿದೆ.

2016- 2017ನೇ ಹಣಕಾಸು ವರ್ಷದಲ್ಲಿ ಕರ್ನಾಟಕ 6ನೇ ಸ್ಥಾನದಲ್ಲಿತ್ತು. ಅದು 2017-18ನೇ ಸಾಲಿನಲ್ಲಿ ಎರಡನೇ ಸ್ಥಾನಕ್ಕೆ ಏರಿಕೆಯಾಗಿದೆ. ಗುಜರಾತ್‌ ನಂ.1 ಸ್ಥಾನಕ್ಕೆ ಜಿಗಿದಿದೆ ಎಂದು ವರದಿ ತಿಳಿಸಿದೆ.

ಹಿಂದಿನ ವರ್ಷ ಛತ್ತೀಸ್‌ಗಢ, ಒಡಿಶಾ ಟಾಪರ್‌ಗಳಾಗಿದ್ದವು. ಬಿಹಾರ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ದರದಲ್ಲಿ ದೇಶದಲ್ಲೇ ಪ್ರಥಮ ಸ್ಥಾನ ಪಡೆದಿದೆ.

ಬಿಹಾರ ಶೇ.11.3ರ ದರದಲ್ಲಿ ಪ್ರಗತಿ ಹೊಂದುತ್ತಿದೆ. ಶೇ.11.2ರ ಜಿಡಿಪಿ ದರದೊಂದಿಗೆ ಆಂಧ್ರ 2ನೇ ಸ್ಥಾನದಲ್ಲಿದ್ದರೆ, ಶೇ.11.1ರ ದರದೊಂದಿಗೆ ಗುಜರಾತ್‌ 3ನೇ ಸ್ಥಾನದಲ್ಲಿದೆ. ಶೇ.9.3 ಜಿಡಿಪಿ ದರ ಸಾಧಿಸಿ ಕರ್ನಾಟಕ 5ನೇ ಸ್ಥಾನ ಗಳಿಸಿದೆ ಎಂದು ಕ್ರಿಸಿಲ್‌ ವರದಿ ಹೇಳುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos