“ಕರ್ನಾಟಕ ಕಲಾ ಪ್ರತಿಭೋತ್ಸವ ” ಕಾರ್ಯಕ್ರಮ

“ಕರ್ನಾಟಕ ಕಲಾ ಪ್ರತಿಭೋತ್ಸವ ” ಕಾರ್ಯಕ್ರಮ

ಪೀಣ್ಯ ದಾಸರಹಳ್ಳಿ, ಅ. 28: ಕರ್ನಾಟಕ ರಾಜ್ಯ ಕಲಾವಿದರ ರಕ್ಷಣಾ ವೇದಿಕೆ(ರಿ) ಬೆಂಗಳೂರು ವತಿಯಿಂದ “ಕರ್ನಾಟಕ ಕಲಾ ಪ್ರತಿಭೋತ್ಸವ ” ಕಾರ್ಯಕ್ರಮದಲ್ಲಿ “ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ” ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಸಾಹಿತಿ ಎಂ ಆರ್ ನದಾಫ್ ಜ್ಯೋತಿ ಬೆಳಗಿ ಉದ್ಘಾಟಿಸಿ ಮಾತನಾಡಿದ ಅವರು, ಕಲೆ ಯಾವುದೇ ಜಾತಿ ಧರ್ಮ ಭೇದಭಾವವಿಲ್ಲದೆ ಬರುವಂತಹದ್ದು. ಪ್ರತಿಯೊಬ್ಬ ಮನುಷ್ಯನಲ್ಲಿಯೂ ಅವರದೇ ಆದಂತಹ ಪ್ರತಿಭೆ ಇರುತ್ತದೆ ಅಂತಹವರನ್ನು ಗುರುತಿಸಿ ಸರ್ಕಾರ ಮಾಡದಿರುವ ಕೆಲಸಗಳನ್ನು ಇಂತಹ ಸಂಸ್ಥೆಗಳು ಮಾಡುವುದು ಹೆಮ್ಮೆಯವಿಷಯ ಎಂದರು.

ಕಲಾವಿದರ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಸುರೇಶ್ ವಾಘಮೋಡಿ ಮಾತನಾಡಿ, ರಾಜ್ಯದಲ್ಲಿ ಎಲ್ಲೇ ಇದ್ದರೂ ಕೂಡ  ಪ್ರತಿಭೆಗಳನ್ನು ಹುಡುಕಿ ಕಲೆ, ಸಾಹಿತ್ಯ, ಸಂಸ್ಕೃತಿ, ಸಮಾಜ ಸೇವೆ ಇನ್ನೂ ಅನೇಕ ಕ್ಷೇತ್ರಗಳಲ್ಲಿ ಪ್ರತಿಭೆಗಳನ್ನು ಗುರುತಿಸಿ ಅವರುಗಳಿಗೆ ಒಂದು ವೇದಿಕೆಯನ್ನು ಕೊಡುವಂತಹ ಕೆಲಸ ಮಾಡಿಕೊಂಡು ಬಂದಿದ್ದು, ಇನ್ನು ಮುಂದೆಯೂ ಕೂಡ ಇದೇ ತರ ವೇದಿಕೆಯನ್ನು ಕೊಟ್ಟು ಪ್ರತಿಭೆಗಳನ್ನು ಗುರುತಿಸುವಂತಹ ಕೆಲಸ ನಮ್ಮಕಲಾವಿದರ ರಕ್ಷಣಾ ವೇದಿಕೆಯದಾಗಿದೆ ಎಂದರು.

ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶರಣಯ್ಯ ಜೆಡಿಮಠ ಮಾತನಾಡಿ ಕಲೆ, ಸಾಹಿತ್ಯ , ಸಂಸ್ಕೃತಿಗೆ ಹೆಚ್ಚು ಬೆಲೆ ಕೊಡುವಂತಹ ಕೀರ್ತಿ ನಮ್ಮ ಉತ್ತರ ಕರ್ನಾಟಕ ಭಾಗದಲ್ಲಿ ಇದೇ ಮೊದಲಿನಿಂದಲೂ ಜಾನಪದ ಗೀತೆಗಳಿಗೆ, ಹಾಡುಗಳಿಗೆ ನಮ್ಮಲ್ಲಿ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾ ಬಂದಿದ್ದೇವೆ ಎಂದರು .

ಈ ಕಾರ್ಯಕ್ರಮದಲ್ಲಿ ಕರ್ನಾಟಕ ಜನಸ್ಪಂದನ ಟ್ರಸ್ಟ್ ರಾಜ್ಯಾಧ್ಯಕ್ಷ ಹನುಮಂತಪ್ಪ ಎಸ್. ಮೇಡೆಗಾರ, ಯುವ ಮುಖಂಡರಾದ ನಿಖಿಲ್ ಶಂಕರ್, ಅಖಿಲ ಕರ್ನಾಟಕ ಮಹಿಳಾ ಘರ್ಜನೆ ರಾಜ್ಯಾಧ್ಯಕ್ಷೆ ಮಂಜುಳಾ, ಲತಾ ಸಿ, ಜ್ಯೋತಿ ಶ್ರೀನಿವಾಸ್, ಕೆ ಬಸವಣ್ಣಗೌಡ, ಅಂಬುಜಾಕ್ಷಿ ಬಿ. ಪಿ.ಇನ್ನೂ ಮುಂತಾದವರು ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos