ಕರಾಟೆ: ಬಾಪೂಜಿ ಶಾಲೆಯ ವಿದ್ಯಾರ್ಥಿಗಳ ಸಾಧನೆ

ಕರಾಟೆ: ಬಾಪೂಜಿ ಶಾಲೆಯ ವಿದ್ಯಾರ್ಥಿಗಳ ಸಾಧನೆ

ಗದಗ: ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿ ನಡೆದ ಚೇತನ ವಿವಿಧೋದ್ದೇಶಗಳ ಸಂಘದಿಂದ ಆಯೋಜಿಸಿದ್ದ
ರಾಜ್ಯಮಟ್ಟದ ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ಅಣ್ಣಿಗೇರಿ ಪಟ್ಟಣದ ಬಾಪೂಜಿ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ವಸತಿ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.

ಎಲ್ಲ ವಿದ್ಯಾರ್ಥಿಗಳು ಕಟಾ ಮತ್ತು ಕುಮಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಬಾಪೂಜಿ ವಿದ್ಯಾನಿಕೇತನ ಸಂಸ್ಥೆಯ ಸಂಸ್ಥಾಪಕರಾದ ಎನ್. ಡಿ. ಧಾರವಾಡ ಅವರು ಈ ಸಂದರ್ಭದಲ್ಲಿ ಮಾತನಾಡಿ ಜೀವನದಲ್ಲಿ ಸೋಲದವರು ಯಾರೂ ಇಲ್ಲ. ಗೆದ್ದವರು ಸೋಲಿನ ಮೆಟ್ಟಿಲನ್ನು ಹತ್ತಿಕೊಂಡೆ ಗೆಲುವಿನ ಶಿಖರ ಮುಟ್ಟಿರುತ್ತಾರೆ.ಯಶಸ್ಸು ಸುಮ್ಮನೆ ಒಲಿಯುವುದಿಲ್ಲ.ಸೋಲು,ಹಿನ್ನಡೆ, ಅವಮಾನಗಳ ರೂಪದಲ್ಲಿ ನಮ್ಮನ್ನು ಪರೀಕ್ಷಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

ತರಬೇತುದಾರರು ಮೆಹಬೂಬ ದೊಡ್ಡಮನಿ, ಸುಲೇಮಾನ ದೊಡ್ಡಮನಿ, ಶಾಲೆಯ ದೈಹಿಕ ಶಿಕ್ಷಕರಾದ ನಾಗೇಶ ಬೆಟಗೇರಿ ಹಾಗೂ ಎಲ್ಲ ಶಿಕ್ಷಕರು, ಸಿಬ್ಬಂದಿ ವರ್ಗದವರು ಹಾಗೂ ಶಾಲೆಯ ಪದಾಧಿಕಾರಿಗಳು ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos