ವಿಶ್ವವಿಖ್ಯಾತ ಬೆಂಗಳೂರು ಕರಗ ಉತ್ಸವಕ್ಕೆ ಕ್ಷಣಗಣನೆ

ವಿಶ್ವವಿಖ್ಯಾತ ಬೆಂಗಳೂರು ಕರಗ ಉತ್ಸವಕ್ಕೆ ಕ್ಷಣಗಣನೆ

ಬೆಂಗಳೂರು: ವಿಶ್ವವಿಖ್ಯಾತ ಬೆಂಗಳೂರು ಕರಗಕ್ಕೆ ಕ್ಷಣಗಣನೆ ಶುರುವಾಗಿದೆ. ಬಿಸಿಲ ನಡುವೆ ಮಲ್ಲಿಗೆ ಘಮದ ಇತಿಹಾಸ ಪ್ರಸಿದ್ಧ ಕರಗ ಮಹೋತ್ಸಕ್ಕೆ ಸಕಲ ರೀತಿಯ ಸಿದ್ಧತೆ ನಡೆಯುತ್ತಿದೆ. ನಗರದ ಸಾಂಸ್ಕೃತಿಕ, ಐತಿಹಾಸಿಕ ಪರಂಪರೆಯ ಹೆಗ್ಗುರುತಾಗಿರುವ, ಹೂವಿನ ದಂಡೆಯನ್ನ ಹೊತ್ತು ಸಾಗುವ ಕರಗ ಕಣ್ಣುಂಬಿಕೊಳ್ಳಲು ಬೆಂಗಳೂರಿಗರು ಕಾತುರಿಂದ ಕಾಯುತ್ತಿದ್ದಾರೆ.

ಚೈತ್ರ ಪೌರ್ಣಿಮೆಯ ಬೆಳದಿಂಗಳ ಬೆಳಕಲ್ಲಿ ಕರಗ ಜರುಗಲಿದ್ದು, ನಿನ್ನೆಯಿಂದಲೇ ಹಸಿಕರಗದ ಶಾಸ್ತ್ರಗಳು ಆರಂಭಗೊಂಡಿದ್ದು, ಅದ್ದೂರಿ ಉತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು ತಾಯಿಗೆ ವಿಶೇಷವಾಗಿ ಬಳೆ ಶಾಸ್ತ್ರ, ತಾಳಿ ಶಾಸ್ತ್ರ, ಹೂ ಶಾಸ್ತ್ರಗಳು ನೆರವೇರಲಿದ್ದು, ಮಧ್ಯ ರಾತ್ರಿ 2 ಗಂಟೆಗೆ ಕರಗ ಮೆರವಣಿಗೆ ಆರಂಭವಾಗಲಿದೆ.

ರಾತ್ರಿ 2 ಗಂಟೆಗೆ ಧರ್ಮರಾಯ ದೇವಸ್ಥಾನದಿಂದ ಕರಗ ಮೆರಣಿಗೆ ಆರಂಭವಾಗಿ ರಾಜ ಮಾರ್ಕೆಟ್ ಸರ್ಕಲ್‌ನಿಂದ ಕೆ ಆರ್ ಮಾರ್ಕೆಟ್ ಮಾರ್ಗವಾಗಿ, ಆಂಜನೇಯ ದೇವಸ್ಥಾನ ಮೂಲಕ ಗಣೇಶ ದೇವಸ್ಥಾನ ತಲುಪಲಿದೆ.

ಫ್ರೆಶ್ ನ್ಯೂಸ್

Latest Posts

Featured Videos