ಕಪಾಳಮೊಕ್ಷ :ಪೊಲೀಸ್ ಪೇದೆಗೆ ಜೀವ ಬೆದರಿಕೆ

ಕಪಾಳಮೊಕ್ಷ :ಪೊಲೀಸ್ ಪೇದೆಗೆ ಜೀವ ಬೆದರಿಕೆ

 ಲಖೀಮಪುರ, ಜೂನ್. 11, ನ್ಯೂಸ್ ಎಕ್ಸ್ ಪ್ರೆಸ್ಕರ್ತವ್ಯ ನಿರತ ಪೊಲೀಸ ಪೇದೆಯ ಕೆನ್ನಗೆ ಬಾರಿಸಿದ್ದಾರೆ ಎಂಬ ಆರೋಪದ ಹಿನ್ನೆಲಯಲ್ಲಿ ಉತ್ತರ ಪ್ರದೇಶದ ದೌರಹಾರ ಲೋಕಸಭಾ ಕ್ಷೇತ್ರದ ಸಂಸದೆ ರೇಖಾ ವರ್ಮಾ ಅವರ ವಿರುದ್ಧ ದೂರು ದಾಖಲಿಸಿದ್ದಾರೆ. ಸಂಸದೆಯಾಗಿ ಆಯ್ಕೆಯಾಗಿರುವ ವರ್ಮಾರಿಗೆ ಮೊಹಮ್ಮದಿ ಪಟ್ಟಣದಲ್ಲಿ ಸನ್ಮಾನ ಸಮಾರಂಭವಿತ್ತು.

ಕಾರ್ಯಕ್ರಮದಿಂದ ಹಿಂದಿರುಗುತ್ತಿದ್ದ ರಾತ್ರಿ ಸುಮಾರು 11 ಗಂಟೆಗೆ ಸಂಸದೆ ನನ್ನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪೇದೆ ಶ್ಯಾಮ್ ಸಿಂಗ್ ಆರೋಪಿಸಿದ್ದಾರೆ.  ಕೆಲ ಸಮಯದ ಬಳಿಕ ಫೋನ್ ಕರೆ ಮಾಡಿದ ಸಂಸದೆ ಹಿಂದಿರುಗಿ ಬರುವಂತೆ ಸೂಚಿಸಿದರು. ರೇಖಾ ವರ್ಮಾರ ಆದೇಶದಂತೆ ಹೋದಾಗ ನನ್ನನ್ನು ಕರೆದು ಕಪಾಳಕ್ಕೆ ಬಾರಿಸಿ, ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಶ್ಯಾಮ್ ಸಿಂಗ್ ದೂರಿನಲ್ಲಿ ದಾಖಲಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos