ಪರಿಚಯ ಮುಚ್ಚಿಟ್ಟು ಚಿಕಿತ್ಸೆ ಪಡೆದ ಪ್ರಧಾನಿ ಮೋದಿ ಚಿಕ್ಕಪ್ಪ ಕಾಂತಿಲಾಲ್!

ಪರಿಚಯ ಮುಚ್ಚಿಟ್ಟು ಚಿಕಿತ್ಸೆ ಪಡೆದ ಪ್ರಧಾನಿ ಮೋದಿ ಚಿಕ್ಕಪ್ಪ ಕಾಂತಿಲಾಲ್!

 ಸೂರತ್, ಮೇ.9, ನ್ಯೂಸ್ ಎಕ್ಸ್ ಪ್ರೆಸ್: ಸೂರತ್ ನ ಸಿವಿಲ್ ಆಸ್ಪತ್ರೆಯಲ್ಲಿ ಬುಧವಾರ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಆಸ್ಪತ್ರೆಗೆ ದಾಖಲಾಗಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಿಕ್ಕಪ್ಪ ಕಾಂತಿಲಾಲ್ ಮೋದಿ ಎಂಬುದು ಗೊತ್ತಾಗ್ತಿದ್ದಂತೆ ಸ್ವಲ್ಪ ಗೊಂದಲ ನಿರ್ಮಾಣವಾಗಿತ್ತು. ಪ್ರಧಾನಿ ಸಂಬಂಧಿ ಎಂದ್ರೆ ಉಳಿದವರಿಗಿಂತ ಹೆಚ್ಚು ಆದ್ಯತೆ ಸಿಗುತ್ತದೆ ಎನ್ನುವ ಕಾರಣಕ್ಕೆ ಕಾಂತಿಲಾಲ್ ತಮ್ಮ ಪರಿಚಯ ಮುಚ್ಚಿಟ್ಟಿದ್ದರಂತೆ. ಬುಧವಾರ ಕಾಂತಿಲಾಲ್ ಮೂತ್ರದ ಸೋಂಕಿನಿಂದ ಬಳಲುತ್ತಿದ್ದರಂತೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದಾರೆ. ಮೋದಿ ಸಂಬಂಧಿ ಎಂಬುದು ಗೊತ್ತಾದ್ರೆ ಸಾಮಾನ್ಯ ರೋಗಿಯಂತೆ ತನ್ನನ್ನು ನೋಡುವುದಿಲ್ಲ ಎನ್ನುವ ಕಾರಣಕ್ಕೆ ಪರಿಚಯ ಮುಚ್ಚಿಟ್ಟಿದ್ದರಂತೆ. ಆದ್ರೆ ದಾಖಲೆ ನೀಡುವಾಗ ವಿಷ್ಯ ಗೊತ್ತಾಗಿದೆ. ಮೋದಿ ಕುಟುಂಬಸ್ಥರು ಸಾಮಾನ್ಯರಂತೆ ಜೀವನ ನಡೆಸ್ತಾರೆ. ಕಾಂತಿಲಾಲ್ ಮೋದಿ ಕೂಡ ಅವ್ರಲ್ಲಿ ಒಬ್ಬರು. ಮೋದಿ ಮುಖ್ಯಮಂತ್ರಿಯಾಗಿದ್ದಾಗ ಇಬ್ಬರು ಅನೇಕ ಬಾರಿ ಭೇಟಿಯಾಗಿದ್ದರಂತೆ. ಆದ್ರೆ ಪ್ರಧಾನಿಯಾದ್ಮೇಲೆ ಭೇಟಿಯಾಗಿಲ್ಲವಂತೆ. ಸೂರತ್ ನಲ್ಲಿ ವಾಸವಾಗಿರುವ ಅವ್ರು, ಮೋದಿ ಸಂಬಂಧಿ ಎಂಬುದು ಗೊತ್ತಾಗ್ತಿದ್ದಂತೆ ಹಿರಿಯ ವೈದ್ಯರು ಹೆಚ್ಚಿನ ಕಾಳಜಿ ವಹಿಸಿದ್ರು ಎಂದು ಕಾಂತಿಲಾಲ್ ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos