ಕಾಂತಾರ ಚಾಪ್ಟರ್1: ಡಿಮ್ಯಾಂಡ್‌ಪ್ಪೋ ಡಿಮ್ಯಾಂಡ್‌ಪ್ಪೋ!!

ಕಾಂತಾರ ಚಾಪ್ಟರ್1: ಡಿಮ್ಯಾಂಡ್‌ಪ್ಪೋ ಡಿಮ್ಯಾಂಡ್‌ಪ್ಪೋ!!

ಬೆಂಗಳೂರು: ಕಾಂತಾರ ಸಿನಿಮಾ ಈಗಾಗಲೇ ಇತಿಹಾಸ ಪುಟಗಳನ್ನ ಸೇರಿದೆ. ರಿಷಬ್ ಶೆಟ್ಟಿ ಅವರ ನಟನೆ ಮತ್ತು ನಿರ್ದೇಶನಕ್ಕೆ ಫಿದಾ ಆದವರೇ ಇಲ್ಲ. ಜತೆಗೆ ಹೊಂಬಾಳೆ ಫಿಲ್ಮಂ ದೃಶ್ಯ ವೈಭವಕ್ಕೆ ಮನಸೋತವರೇ ಇಲ್ಲ. ಮ್ಯೂಸಿಕಂತೂ ಒಂದು ಕ್ಷಣ ಕಳೆದೋಗುವ ಹಾಗಿದೆ.ಆದ್ರೆ ಈಗ ಕಾಂತಾರ 1 ಸಿನಿಮಾ ಸೆಟ್ಟೇರಲು ಸಿದ್ಧವಾಗಿದ್ದು. ಈಗಾಗಲೇ ಶೆಟ್ಟರ ಚಿತ್ರ ತಂಡ ಫಸ್ಟ್ ಲೂಕ್ ಬಿಡುಗಡೆ ಮಾಡಲಾಗಿದೆ.

ಕಾಂತಾರ ಚಾಪ್ಟರ್ 1’ ಸಿನಿಮಾ ಇತ್ತೀಚೆಗೆ ಸೆಟ್ಟೇರಿದೆ. ಈ ಸಿನಿಮಾದ ಪೂಜಾ ಕೆಲಸಗಳನ್ನು ತಂಡ ಸಿಂಪಲ್ ಆಗಿ ನೆರವೇರಿಸಿತ್ತು. ಇತ್ತೀಚೆಗೆ ತಂಡ ಕಲಾವಿದರ ಆಯ್ಕೆಗೆ ಅರ್ಜಿ ಸಲ್ಲಿಕೆ ಮಾಡಲು ಹೊಂಬಾಳೆ ಫಿಲ್ಮ್ಸ್ ಅವಕಾಶ ನೀಡಿತ್ತು. ಇದಕ್ಕೆ ಬರೋಬ್ಬರಿ 25 ಸಾವಿರ ಅರ್ಜಿಗಳು ಬಂದಿವೆ. ‘ಕಾಂತಾರ: ಚಾಪ್ಟರ್ 1’ ಹೈಪ್ ಎಷ್ಟಿದೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ.

‘ಕಲಾವಿದರು ಬೇಕಾಗಿದ್ದಾರೆ’ ಎಂದು ಹೊಂಬಾಳೆ ಫಿಲ್ಮ್ಸ್ ಇತ್ತೀಚೆಗೆ ಪೋಸ್ಟ್ ಮಾಡಿತ್ತು. ಪುರುಷ ಕಲಾವಿದರ ವಯಸ್ಸು 30ರಿಂದ 60 ವರ್ಷ ಅಂತರದಲ್ಲಿ ಇರಬೇಕು ಎಂದಿದ್ದರು. ಮಹಿಳಾ ಕಲಾವಿದರ ವಯಸ್ಸು 18ರಿಂದ 60 ವರ್ಷ ಅಂತರದಲ್ಲಿ ಇರಬೇಕು ಎಂದು ಹೊಂಬಾಳೆ ಹೇಳಿತ್ತು.  ವೆಬ್​ಸೈಟ್​ಗೆ ಭೇಟಿ ನೀಡಿ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕಿತ್ತು. 14 ಡಿಸೆಂಬರ್​ವರೆಗೆ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ಇತ್ತು. ಈಗ ಬರೋಬ್ಬರಿ 25 ಸಾವಿರ ಅರ್ಜಿಗಳು ಬಂದಿವೆ.

 

ಫ್ರೆಶ್ ನ್ಯೂಸ್

Latest Posts

Featured Videos